ಶ್ರೀಮಂಗಲ, ಆ. ೨೫: ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೭ನೇ ಮಹಾಸಭೆ ಸಂಘದ ಅಧ್ಯಕ್ಷ ಅಲ್ಲುಮಾಡ ಸಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು.

೨೦೨೪-೨೫ನೇ ಸಾಲಿನ ಆಯವ್ಯಯ ಹಾಗೂ ಲೆಕ್ಕ ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿ ಕೂಲಂಕÀಷವಾಗಿ ಚರ್ಚಿಸಲಾಯಿತು. ವರದಿ ಸಾಲಿನಲ್ಲಿ ಆದಾಯ ರೂ. ೮೫.೦೮ ಲಕ್ಷ ಹಾಗೂ ವೆಚ್ಚ ರೂ. ೫೫.೨೦ ಲಕ್ಷಗಳಾಗಿದ್ದು, ರೂ. ೭.೧೦ ಲಕ್ಷಗಳನ್ನು ಅನುತ್ಪಾದಕ ಸಾಲಕ್ಕೆ ಕಾಯ್ದಿರಿಸಿದ್ದು ಬಾಕಿ ರೂ. ೨೨.೭೮ ಲಕ್ಷ ನಿವ್ವಳ ಲಾಭಗಳಿಸಿದೆ. ಬೈಲಾಗನುಗುಣವಾಗಿ ಎಲ್ಲಾ ವಿಧಿಗಳಿಗೆ ಕಾಯ್ದಿರಿಸಿ ಸದಸ್ಯರಿಗೆ ಶೇ. ೧೨ ರಷ್ಟು ಡಿವಿಡೆಂಡ್ ವಿತರಿಸಲು ತೀರ್ಮಾನಿಸಲಾಯಿತು.

ಸಂಘವು ಸದರಿ ಸಾಲಿನಲ್ಲಿ ಸದಸ್ಯರಿಗೆ ಕೃಷಿ ಹಾಗೂ ಕೃಷಿಯೇತರ ಸಾಲವಾಗಿ ರೂ. ೮.೨೯ ಕೋಟಿ ರೂಪಾಯಿಗಳನ್ನು ವಿತರಿಸಿದ್ದಲ್ಲದೆ ರೂ. ೬ ಕೋಟಿ ಮೌಲ್ಯದ ರಸಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳು ಹಾಗೂ ಸಿಮೆಂಟ್ ವ್ಯವಹಾರ ನಡೆಸಿರುತ್ತದೆ ಎಂದು ಅಧ್ಯಕ್ಷ ಅಲ್ಲುಮಾಡ ಪ್ರಕಾಶ್ ವಿವರಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಬಿ. ಪರಶಿವ, ನಿರ್ದೇಶಕರುಗಳಾದ ಕೆ.ಪಿ. ಕಾರ್ಯಪ್ಪ, ಎ.ಬಿ. ಮುತ್ತಪ್ಪ, ಎಂ.ಪಿ. ವಿಜಯ, ಎಂ.ಎನ್. ರಾಜೇಶ್, ಹೆಚ್.ಆರ್. ವಿಜಯ, ಪಿ.ಕೆ. ಬೆಳ್ಳಿ, ಟಿ.ಎನ್. ಭವಾನಿ, ಎಂ.ಪಿ. ಶೋಭಾ, ಎಂ.ಎ. ಪೂವಮ್ಮ, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಹೆಚ್.ಎಂ. ಚಂದ್ರಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್. ಕುಶಾಲಪ್ಪ ಹಾಜರಿದ್ದರು.

ಅಧ್ಯಕ್ಷ ಅಲ್ಲುಮಾಡ ಪ್ರಕಾಶ್ ಸ್ವಾಗತಿಸಿ, ನಿರ್ದೇಶಕ ಕಳ್ಳಿಚಂಡ ಕಾರ್ಯಪ್ಪ ವಂದಿಸಿದರು.