ಸೋಮವಾರಪೇಟೆ, ಆ. ೨೫: ತಾಲೂಕಿನ ನಗರಳ್ಳಿ ಗ್ರಾಮದ ಯುವಕ ನಿರ್ದೇಶಿಸಿರುವ ‘ಕ್ಲಾಸ್ & ಟೀಥ್’ ಕಿರುಚಿತ್ರವು ಬೆಂಗಳೂರು ಅಂರ‍್ರಾಷ್ಟಿçÃಯ ಕಿರುಚಿತ್ರೋತ್ಸವದಲ್ಲಿ ಪ್ರಶಸ್ತಿಗೆ ಭಾಜನವಾಗಿದೆ.

ಬೆಂಗಳೂರಿನ ಸುಚಿತ್ರ ಫಿಲ್ಮ್ ಅಕಾಡೆಮಿಯಲ್ಲಿ ನಡೆದ ಆಸ್ಕರ್ ಅಕಾಡೆಮಿ ಮಾನ್ಯತೆಯ ಕಿರುಚಿತ್ರೋತ್ಸವದಲ್ಲಿ ನಗರಳ್ಳಿ ಗ್ರಾಮದ ಎಂ.ಡಿ. ರಮೇಶ್ ಹಾಗೂ ಅನಸೂಯ ದಂಪತಿ ಪುತ್ರ ಸೃಜನ್ ಬೆಳ್ಳಿ ನಿರ್ದೇಶಿಸಿರುವ ಕುತೂಹಲಕಾರಿ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ‘ಕ್ಲಾಸ್ & ಟೀಥ್’ ಕಿರುಚಿತ್ರವು ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಕಿರುಚಿತ್ರವಾಗಿ ಹೊರಹೊಮ್ಮಿದೆ. ಸೃಜನ್ ಬೆಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ಸೋಮವಾರಪೇಟೆ ಬಜೆಗುಂಡಿಯ ಶ್ರೀಕಾಂತ್ ಗಣೇಶ್, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಚಿತ್ರದ ನಟ ಕಾಸರಗೋಡಿನ ರಾಧಾಕೃಷ್ಣ ಕುಂಬ್ಲೆ, ಪ್ರಮುಖ ತಾರಾಗಣದಲ್ಲಿದ್ದಾರೆ.

ಸೋಮವಾರಪೇಟೆ ಪುಷ್ಪಗಿರಿ ತಪ್ಪಲಿನ ಹೆಗ್ಗಡಮನೆ, ಪುಷ್ಪಗಿರಿ, ಹಂಚನಳ್ಳಿ, ಬೀದಳ್ಳಿ, ಕುಮಾರಳ್ಳಿ, ದೊಡ್ಡಬೆಟ್ಟ, ಪಟ್ಟಪಾರೆ ಸೇರಿದಂತೆ ಪಟ್ಟಣದಲ್ಲಿ ಒಟ್ಟು ೮ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರೀಕರಣ ಅಂತಿಮ ಭಾಗವಾಗಿ ೩೦ ನಿಮಿಷದ ಕಿರುಚಿತ್ರ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರು ಚಿತ್ರೋತ್ಸವದ ಆಯೋಜಕ ಆನಂದ್ ವರದರಾಜ್, ರಾಜೇಶ್ ನಟರಂಗ್, ಕನ್ನಡ ಚಲನಚಿತ್ರದ ಹಿರಿಯ ಕಲಾವಿದೆ ಸುಧಾರಾಣಿ, ಅರುಣ್ ಸಾಗರ್ ಸೇರಿದಂತೆ ಇತರರು ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಮಾಡಿದರು.

“ಕ್ಲಾಸ್ ಅಂಡ್ ಟೀಥ್” ಚಿತ್ರವು ಕಳೆದ ವರ್ಷ ಮುಂಬೈನ ಮಾಮಿ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಆ ಸಮಯದಲ್ಲಿ ಇದು ಮಾಮಿಯಲ್ಲಿ ಪ್ರೀಮಿಯರ್ ಆಗಿದ್ದ ಏಕೈಕ ಕನ್ನಡ ಕಿರುಚಿತ್ರವಾಗಿತ್ತು. ನಂತರ ಚಿತ್ರವು ಜೈಪುರ ಚಲನ ಚಿತ್ರೋತ್ಸವದಲ್ಲೂ ಪ್ರದರ್ಶನಗೊಂಡಿತ್ತು.

ನಿರ್ದೇಶಕ ಸೃಜನ್ ಬೆಳ್ಳಿ ಅವರು, ನಟೇಶ್ ಹೆಗ್ಡೆ ನಿರ್ದೇಶನದ ವಾಘಾಚಿಪಾಣಿ (ಟೈಗರ್’ಸ್ ಪಾಂಡ್) ಚಿತ್ರದಲ್ಲಿ ಸಹಾಯಕರಾಗಿ, ಉತ್ಸವ್ ಗೋನವಾರ ಅವರ ‘ಫೋಟೋ’ ಹಾಗೂ ಗಣೇಶ್ ಹೆಗ್ಡೆ ಅವರ ‘ಕುರ್ಕ’ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಣ್ಣಯ್ಯನ ಪಾತ್ರದಲ್ಲಿ ಬಜೆಗುಂಡಿ ಗ್ರಾಮದ ಶ್ರಿಕಾಂತ್ ಗಣೇಶ್, ಕಾಡ ಪಾತ್ರದಲ್ಲಿ ರಾಧಾಕೃಷ್ಣ ಕುಂಬ್ಳೆ ನಟಿಸಿದ್ದಾರೆ.

‘ಕಾಡುಹಂದಿಯ ಬೇಟೆಗೆಂದು ಹೋಗಿದ್ದ ಅಣ್ಣಯ್ಯ ಮತ್ತು ಮಾತು ಬಾರದ ತೋಟದ ಕೆಲಸಗಾರ ಕಾಡ, ಕತ್ತಲಲ್ಲಿ ಸಿಡಿದ ಗುಂಡಿನಿAದ ಆಕಸ್ಮಿಕವಾಗಿ ಬೇಟೆಯಾದ ಹುಲಿಯನ್ನು ಕಂಡು ವಿಸ್ಮಿತರಾಗುತ್ತಾರೆ. ಅಣ್ಣಯ್ಯ ಹುಲಿಯ ಉಗುರು ಮತ್ತು ಚರ್ಮವನ್ನು ಕಳ್ಳ ಸಾಗಾಣಿಕೆ ಮಾಡಲು ತೀರ್ಮಾನಿಸುತ್ತಾನೆ. ಆದರೆ ಆ ಚಟುವಟಿಕೆಯಲ್ಲಿ ತೊಡಗಿರುವಾಗಲೇ ಕಾಡ, ಅಚಾನಕ್ಕಾಗಿ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿ ಬೀಳುತ್ತಾನೆ. ಕಾಡನ ಮಗ ತನ್ನ ತಂದೆಯನ್ನು ಸಂಕಷ್ಟದಿAದ ಪಾರು ಮಾಡುವಂತೆ ಇದೇ ಅಣ್ಣಯ್ಯನ ಬಳಿ ಬೇಡಿಕೊಂಡಾಗ-ಅವನು ಹೇಳುವ ಸುಳ್ಳುಗಳು ಆತನ ಭಯವನ್ನು ಹೆಚ್ಚಿಸುತ್ತದೆ. ಕಾಡ ಬಿಡುಗಡೆಯಾದ ಕ್ಷಣದಿಂದಲೇ ಆಟ ಬೇರೆಡೆಗೆ ತಿರುಗುತ್ತದೆ. ಅಧಿಕಾರದ ಸಮೀಕರಣ ತಲೆಕೆಳಗಾಗುತ್ತಾ? ಬೇಟೆ ಯಾರು? ಬೇಟೆಗಾರ ಯಾರು? ಎಂಬುದರ ಸುತ್ತ ಕಥೆ ಸಾಗುತ್ತದೆ’.