ಸುಂಟಿಕೊಪ್ಪ, ಆ.೨೫ : ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆರ್ಮಿ ಡಿಸೋಜಾ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಸಹಕಾರ ಅಭಿವೃದ್ಧಿ ಅಧಿಕಾರಿ ಮೋಹನ್ ಚುನಾವಣಾಧಿಕಾರಿಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನಲೆ ಜೆರ್ಮಿ ಡಿಸೋಜಾ ಆಯ್ಕೆ ಆದರು.

ಈ ಸಂದರ್ಭ ಉಪಾಧ್ಯಕ್ಷರಾದ ಕೆ.ವಿ. ರಮ್ಯ, ಸದಸ್ಯರುಗಳಾದ ಎಂ.ಎನ್. ಕೊಮಾರಪ್ಪ, ಕುಂಜಿಲನ ಎಸ್. ಮಂಜುನಾಥ್, ಎನ್.ಸಿ.

ಪೊನ್ನಪ್ಪ, ಡಿ.ಬಿ.ರಮೇಶ್‌ಚಂಗಪ್ಪ, ಡಿ.ಕೆ. ಗಂಗಾಧರ, ಡಾ. ಶಶಿಕಾಂತ ರೈ, ಕೆ.ಪಿ. ಜಗನ್ನಾಥ್, ಪಿ.ಪಿ.ಉದಯಕುಮಾರ್, ಕೆ.ಆರ್. ಮಂಜುನಾಥ, ಬಿ.ಕೆ. ದಯಾನಂದ, ಪಿ.ಪಿ. ಲೀಲಾವತಿ ಮತ್ತು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರ ಇದ್ದರು.