ಮಡಿಕೇರಿ, ಆ. ೨೫: ಕತ್ತಲೆಕಾಡುವಿನ ವಿನಾಯಕ ಸೇವಾ ಟ್ರಸ್ಟ್ ವತಿಯಿಂದ ೧೯ನೇ ವರ್ಷದ ಗೌರಿ ಗಣೇಶೋತ್ಸವ ತಾ.೨೭ರಿಂದ ೨೯ರವರೆಗೆ ಜರುಗಲಿದೆ. ೨೭ರಂದು ಬೆಳಿಗ್ಗೆ ೮ ಗಂಟೆಗೆ ಗಣ ಹೋಮ, ಗಣೇಶ ಮೂರ್ತಿ ಪ್ರತಿಷ್ಠಾಪನೆ, ೯.೧೫ಕ್ಕೆ ಭಾರತ್ ಮಾತಾ ಪೂಜೆ, ಬಳಿಕ ಗ್ರಾಮಸ್ಥರಿಗೆ ಆಟೋಟ ಸ್ಪರ್ಧೆ ನಡೆಯಲಿದೆ. ಸಂಜೆ ೬ ಗಂಟೆಗೆ ಸುಭಾಷ್ ಮತ್ತು ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಾ.೨೮ರಂದು ಸಂಜೆ ೬ ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ರಾತ್ರಿ ೮ ಗಂಟೆಗೆ ಅನ್ನ ಸಂತರ್ಪಣೆ, ೯ ಗಂಟೆಗೆ ಕ್ರೀಡಾಕೂಟ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ತಾ.೨೯ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ೧ ಗಂಟೆಗೆ ಅನ್ನ ಸಂತರ್ಪಣೆ, ೨ ಗಂಟೆಗೆ ಅಲಂಕೃತ ಮಂಟಪದಲ್ಲಿ ಗಣಪತಿ ಮೂರ್ತಿಯ ಶೋಭಾಯಾತ್ರೆ ಬಳಿಕ ಕ್ಲೋಸ್ಬರ್ನ್ ಕೆರೆಯಲ್ಲಿ ವಿಸರ್ಜಿಸಲಾಗುವುದೆಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.