ವೀರಾಜಪೇಟೆ, ಆ. ೨೩: ೧೮೬ನೇ ವಿಶ್ವ ಛಾಯಾಚಿತ್ರಗ್ರಹಣ ದಿನವನ್ನು ದ.ಕೊಡಗು ಛಾಯಾಚಿತ್ರಗಾರರ ಸಂಘದ ವತಿಯಿಂದ ಮಂಗಳವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಚೆನ್ನಂಗಿ ಗ್ರಾಮದ ಬಸವನಹಳ್ಳಿಯ ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಆಚರಣೆ ಮಾಡಲಾಯಿತು. ದ.ಕೊಡಗು ಛಾಯಾಚಿತ್ರಗಾರರ ಸಂಘದ ಅಧ್ಯಕ್ಷ ಡಿ.ಸಿ. ರವೀಂದ್ರ, ಹಾಗೂ ಶಾಲೆಯ ಶಿಕ್ಷಕರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅಧ್ಯಕ್ಷ ರವೀಂದ್ರ ಅವರು ವಿಶ್ವ ಛಾಯಾಚಿತ್ರಗಾರರ ಸಂಘದ ವತಿಯಿಂದ ಪ್ರತಿವರ್ಷ ವಿವಿಧ ಶಾಲೆಗಳು, ಆಶ್ರಮಗಳು, ಬಡ ವಿದ್ಯಾರ್ಥಿಗಳ ವಸತಿ ಶಾಲೆಗಳಿಗೆ ಅಗತ್ಯವಾದ ವಸ್ತುಗಳನ್ನು ನೀಡಲು ಆರಂಭಿಸಿದ್ದೇವೆ. ಅದೇ ರೀತಿ ಈ ವರ್ಷವು ವಾಲ್ಮೀಕಿ ಆಶ್ರಮ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ನಮ್ಮ ಸಂಘದ ವತಿಯಿಂದ ಅಗತ್ಯವಾದ ವಸ್ತುಗಳನ್ನು ನೀಡಿದ್ದೇವೆ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಅವರು ಸಂಘ ನಡೆದು ಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು. ಸಂಘದ ಸದಸ್ಯರಾದ ನಾಸಿರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಆಶ್ರಮ ಶಾಲೆಯ ಮಕ್ಕಳಿಗೆ ವಿವಿಧ ರೀತಿಯ ಕ್ರೀಡಾ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ಮಕ್ಕಳಿಗೆ ಊಟದ ವ್ಯವಸೈಎಯನ್ನು ಸಂಗದ ವತಿಯಿಂದ ನೀಡಲಾಯಿತು. ದ.ಕೊಡಗು ಛಾಯಾಚಿತ್ರಗಾರರ ಸಂಘದ ಎಲ್ಲಾ ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.