ಮಡಿಕೇರಿ, ಆ. ೨೪ : ಅರೆ ನೀರಾವರಿ ಪ್ರದೇಶದ ಕೃಷಿಕರಿಗೆ ನೀರಾವರಿ ಸೌಲಭ್ಯ ಒದಗಿಸಬೇಕೆಂಬ ಮಹತ್ವದ ಉದ್ದೇಶದೊಂದಿಗೆ ಕಳೆದ ೩೩ ವರ್ಷಗಳ ಹಿಂದೆ ಆರಂಭವಾದ ಕಣಿವೆ ಏತನೀರಾವರಿ ಯೋಜನೆ ರೈತರಿಗೆ ವರದಾನವಾಗುವ ಬದಲು ಶಾಪಗ್ರಸ್ತ ಯೋಜನೆಯಾಗಿದೆ.

ಕುಶಾಲನಗರ ತಾಲೂಕಿನ ಕಣಿವೆ ಬಳಿಯ ಹಾರಂಗಿ ಎಡದಂಡೆ ಕಾಲುವೆಯ ಎಂಟನೇ ತೂಬಿನ ಬಳಿ ೩೩ ವರ್ಷಗಳ ಹಿಂದೆ ಅಂದು ೬೩೯ ಲಕ್ಷ ರೂಗಳನ್ನು ವ್ಯಯಿಸಿ ನಿರ್ಮಿಸಿದ್ದ ಈ ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲಗಳ ಬದಲಾಗಿ ಅನಾನುಕೂಲಗಳೇ ಹೆಚ್ಚಾಗಿದ್ದು ಕಳೆದ ಮೂರು ದಶಕಗಳಿಂದಲೂ ಈ ಯೋಜನೆಯಿಂದಾಗಿ ರೈತರಿಗೆ ಆಗುತ್ತಿರುವ ಅನಾನುಕೂಲ ಅಷ್ಟಿಷ್ಟಲ್ಲ. ಈ ಬಗ್ಗೆ ಖುದ್ದಾಗಿ ನಮ್ಮ ಬಳಿ ಬಂದು ನಮ್ಮ ರೋದನೆ ಆಲಿಸುವವರೇ ಇಲ್ಲವಲ್ಲ ಎಂಬುದು ಇಲ್ಲಿನ ಕೃಷಿಕರು ಅಳಲು.

ಹೆಬ್ಬಾಲೆ ಹಾಗೂ ತೊರೆನೂರು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಆರಂಭವಾದ ಈ ಯೋಜನೆಗೆ ಇಲ್ಲಿನ ಗ್ರಾಮಗಳ ನೂರಾರು ರೈತರು ತುಂಬಾ ಸಂತಸದಿAದ ತಮ್ಮ ತಮ್ಮ ಜಮೀನು, ಮನೆ ಹಾಗೂ ನಿವೇಶನಗಳನ್ನು ಕಾಲುವೆ ನಿರ್ಮಾಣಕ್ಕಾಗಿ ಯೋಜನೆಯ ಸಂದರ್ಭ ಬಿಟ್ಟು ಕೊಟ್ಟಿದ್ದರು.

ಇಚ್ಛಾಶಕ್ತಿ ಕೊರತೆ

ದೂರದೃಷ್ಟಿಯ ಚಿಂತನೆಯಿಲ್ಲದ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ರಾಜಕಾರಣಿಗಳು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲದ ಅಧಿಕಾರಿಗಳ ನಿರಾಸಕ್ತಿಯಿಂದಾಗಿ

ಮೊದಲ ಪುಟದಿಂದ) ಈ ಯೋಜನೆ ಇಂದು ಹಳ್ಳಹಿಡಿದ ಯೋಜನೆಯಾಗಿದೆ ಎಂದರೆ ತಪ್ಪೇನು ಇಲ್ಲ.

ಪ್ರಯೋಜನ ಪಡೆಯಬೇಕಾದ ಗ್ರಾಮಗಳು

ಈ ಯೋಜನೆಯು ಪರಿಣಾಮಕಾರಿಯಾಗಿ ಒಂದು ವೇಳೆ ಜಾರಿಯಾಗಿದ್ದರೆ ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಚಿನ್ನೇನಹಳ್ಳಿ ಗ್ರಾಮದ ೨೭೪ ಎಕರೆ, ಹಳಗೋಟೆಯ ೨೪೦ ಎಕರೆ ತೊರೆನೂರು ಗ್ರಾ.ಪಂ. ನ ದೊಡ್ಡ ಅಳುವಾರ ಗ್ರಾಮದ ೯೮ ಎಕರೆ, ಚಿಕ್ಕ ಅಳುವಾರದ ೩೯೪ ಎಕರೆ, ೬ನೇ ಹೊಸಕೋಟೆಯ ೩೫೮ ಎಕರೆ, ಅಂದಾನಿಪುರದ ೧೩೬ ಎಕರೆ ಸೇರಿ ಒಟ್ಟು ೬ ಗ್ರಾಮಗಳ ೧,೫೦೦ ಎಕರೆ ಭೂಮಿಗೆ ಈ ನೀರಾವರಿ ಯೋಜನೆಯ ಪ್ರಯೋಜನ ದೊರಕಬೇಕಿತ್ತು. ಆದರೆ ಈ ಯೋಜನೆ ವ್ಯವಸ್ಥಿತವಾಗಿ ಆಗದ ಕಾರಣ ಈ ಭಾಗದ ಮಂದಿ ಅಂಗೈಯಲ್ಲೇ ನೀರು ಇಟ್ಟುಕೊಂಡು ಊರೆಲ್ಲಾ ನೀರಿಗಾಗಿ ಅಲೆದಂತೆ ಆಗುತ್ತಿದೆ.

ಯೋಜನೆಯ ವಿವರ

ಉದ್ದೇಶಿತ ಏತ ನೀರಾವರಿ ಯೋಜನೆಯನ್ನು ರೈತರ ಪಾಲಿನ ಸಂಜೀವಿನಿ ಯಾಗಿಸಲು ನೀರಾವರಿ ಇಲಾಖೆಯು ಹಾರಂಗಿ ಎಡದಂಡೆ ಕಾಲುವೆಯ ೧೨.೨೦ ನೇ ಕಿಮೀ ನಲ್ಲಿನ ಕಾಲುವೆ ದಂಡೆಯಲ್ಲಿ ೦.೮೦ ದಶಲಕ್ಷ ಘನ ಅಡಿಗಳ ಸಾಮರ್ಥ್ಯದ ನೀರಿನ ಕೊಳಾಯಿಗಳನ್ನು ಕಾಲುವೆಯ ತಳಮಟ್ಟದಿಂದ ಮೇಲಿನ ಕಾಲುವೆಯವರೆಗೆ ೫೦ ಮೀ. ಎತ್ತರಕ್ಕೆ ನಿರ್ಮಿಸಿತ್ತು. ಹಾಗೆಯೇ ೫೦೦ ಅಶ್ವಶಕ್ತಿ ಯುಳ್ಳ ೪ ಯಂತ್ರಗಳನ್ನು ಇಲ್ಲಿ ಅಳವಡಿಸಿತ್ತು. ಎರಡು ಯಂತ್ರಗಳು ಆರಂಭದಲ್ಲೇ ರಿಪೇರಿಯಾಗಿದ್ದವು.

ಉಳಿದ ೫೦೦ ಅಶ್ವಶಕ್ತಿಯ ಸಾಮರ್ಥ್ಯದ ಎರಡು ಯಂತ್ರಗಳಿAದ ರಾತ್ರಿ ಹಾಗೂ ಹಗಲು ಪ್ರತ್ಯೇಕವಾಗಿ ನೀರೆತ್ತುವ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.

ಸರಾಗವಾಗಿ ಹರಿಯದ ನೀರು

ಈ ಏತನೀರಾವರಿಯ ಯಂತ್ರಾಗಾರದಿAದ ಎತ್ತುವ ೪೨ ಕ್ಯೂಸೆಕ್ಸ್ ನಷ್ಟು ನೀರು ಆ ಭಾಗದ ರೈತರ ಯಾವುದೇ ಜಮೀನಿಗೆ ೩೦ ವರ್ಷಗಳ ಇತಿಹಾಸದಲ್ಲಿ ಇದುವರೆಗೂ ಸರಾಗವಾಗಿ ಹರಿಯಲಿಲ್ಲ.

ಏಕೆಂದರೆ ನಿರ್ಮಿಸಿರುವ ಕಾಲುವೆಗಳು ಅವೈಜ್ಞಾನಿಕವಾಗಿವೆ ಹಾಗೂ ಅಪೂರ್ಣವಾಗಿವೆ. ಜೊತೆಗೆ ಕಾಲುವೆಗಳಲ್ಲಿ ಮಳೆಯ ನೀರು ಹರಿದ ಪರಿಣಾಮ ಯಥೇಚ್ಛವಾಗಿ ಹೂಳು ಹಾಗೂ ಸಸ್ಯ ರಾಶಿಗಳು ಬೆಳೆದು ಮರಗಳಾಗಿವೆ.

ಆದ್ದರಿಂದ ನೀರು ಇಲ್ಲಿ ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ರೈತರು ಸಾಲು ಸಾಲು ಸಮಸ್ಯೆಗಳನ್ನು ಹೇಳುತ್ತಲೇ ಇದ್ದಾರೆ.

ನೀರಿನಿಂದ ಇದ್ದ ಬೆಳೆಯೂ ಹಾಳು

ಬೇಕಾಬಿಟ್ಟಿಯಾಗಿ ನಿರ್ಮಿಸಿರುವ ಏತನೀರಾವರಿಯ ನೀರಿನ ಮೇಲೆ ಖಚಿತತೆ ಇಲ್ಲದ ಇಲ್ಲಿನ ಹಲವು ಕೃಷಿಕರು ಸ್ವತಃ ಹಣ ವ್ಯಯಿಸಿ ಕೊಳವೆ ಬಾವಿಗಳನ್ನು ತಮ್ಮ ತಮ್ಮ ಜಮೀನುಗಳಲ್ಲಿ ಹಾಕಿಸಿಕೊಂಡು ಬೆಳೆ ಮಾಡುತ್ತಿದ್ದಾರೆ.

ಹಾಗಾಗಿ ಕಾಲುವೆಗಳಲ್ಲಿ ಹರಿಬಿಡುವ ಅವೈಜ್ಞಾನಿಕವಾಗಿ ಹರಿವ ನೀರು ಕೃಷಿ ಫಸಲಿಗೆ ಹರಿದು ಇದ್ದ ಬೆಳೆಯೂ ಹಾಳಾಗುವ ಭೀತಿಯಲ್ಲಿ ಇಲ್ಲಿನ ರೈತರಿದ್ದಾರೆ.

ತಿಂಗಳಿಗೆ ಲಕ್ಷಾಂತರ ರೂ. ಕರೆಂಟ್ ಬಿಲ್

ಕುಶಾಲನಗರದಿಂದ ಕಣಿವೆಯ ಈ ಏತನೀರಾವರಿ ಯೋಜನೆಯವರೆಗೂ ಕುಶಾಲನಗರದ ಚೆಸ್ಕಾಂನಿAದ ಪ್ರತ್ಯೇಕವಾಗಿ ಪಡೆದಿರುವ ವಿದ್ಯುತ್ ಸಂಪರ್ಕದ ತಿಂಗಳ ಬಿಲ್ ಲಕ್ಷಾಂತರ ರೂ ಬರುತ್ತಿದ್ದು ನೀರಾವರಿ ಇಲಾಖೆ ಪಾವತಿಸುತ್ತಿದೆ.

ಆದರೆ ಇದೇ ಹಣವನ್ನು ಇಲ್ಲಿನ ರೈತರಿಗೆ ಹಂಚಿಕೆ ಮಾಡಿದ್ದಲ್ಲಿ ನಾವುಗಳು ಮತ್ತಷ್ಟು ಸಮೃದ್ದಿಯಾಗಿ ಕೃಷಿ ಮಾಡುತ್ತಿದ್ದೆವು ಎನ್ನುತ್ತಾರೆ ಇಲ್ಲಿನ ಕೃಷಿಕ ಹೆಬ್ಬಾಲೆಯ ರಾಜಶೇಖರ್.

ವಾರ್ಷಿಕ ಮೂರು ಸಾವಿರ ಮೆಟ್ರಿಕ್ ಟನ್ ಆಹಾರೋತ್ಪತ್ತಿಯ ಅಂದಾಜಿನ ಈ ಯೋಜನೆ ಇದೂವರೆಗೂ ರೈತರಿಗೆ ಗುರಿ ತಲುಪಲು ವರವಾಗುವ ಬದಲು ಶಾಪವಾಗಿ ಮಾರ್ಪಟ್ಟಿದೆ.

ಹಾಳು ಬಿದ್ದ ವಸತಿ ಗೃಹಗಳು

ಏತನೀರಾವರಿ ಯೋಜನಾ ಘಟಕ ನಿರ್ಮಾಣದ ಸಂದರ್ಭ ಇಲ್ಲಿ ಕರ್ತವ್ಯಗೈವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆAದು ಲಕ್ಷಾಂತರ ರೂಗಳನ್ನು ವಿನಿಯೋಗಿಸಿ ನಿರ್ಮಿಸಿದ್ದ ಎರಡು ಜೋಡಿ ವಸತಿ ಗೃಹಗಳು ಕಳಪೆ ಗುಣಮಟ್ಟದಲ್ಲಿದ್ದು ಇದೂವರೆಗೂ ಬಳಕೆಯಾಗಲೇ ಇಲ್ಲ. ಹಾಗಾಗಿ ಈ ಕಟ್ಟಡಗಳಲ್ಲಿ ನೀರು ಸೋರಿಕೆಯಾಗಿ ಕುಸಿಯುವ ಹಂತದಲ್ಲಿವೆ. ಹಾಗೆಯೇ ಇದಕ್ಕೆ ಅಳವಡಿಸಿದ್ದ ಕಿಟಕಿ ಬಾಗಿಲುಗಳು ಕಳ್ಳರ ಪಾಲಾಗಿದ್ದು ಇಂದು ಹೇಳ ಹೆಸರಿಲ್ಲದೇ ಹಾಳಾಗಿವೆ.

ಹಾಗಾಗಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರÀÄ ಈ ಯೋಜನೆಯ ಕಡೆ ಗಮನಹರಿಸಿ ಈ ಭಾಗದ ಕೃಷಿಕರಿಗೆ ಅನುಕೂಲ ಒದಗಿಸುವತ್ತ ಮುಂದಾಗಬೇಕಿದೆ.