ಮಡಿಕೇರಿ, ಆ. ೨೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಮೈಸೂರು ಕೊಡವ ಸಮಾಜದ ಸಹಯೋಗದಲ್ಲಿ ಮೈಸೂರು ಕೊಡವ ಸಮಾಜದಲ್ಲಿ ಶನಿವಾರ “ಕೊಡವಾಮೆರ ಆರ - ಬೇರ'' ಎಂಬ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಕೊಡವ ಸಂಸ್ಕೃತಿಯ, ಭಾಷೆಯ ಮಹತ್ವ ಸಾರುವುದರೊಂದಿಗೆ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯು ಕೊಡವ ಭಾಷೆಗೆ ಒಳಪಡುವ ಎಲ್ಲಾ ಸಮುದಾಯದವರು ಕೊಡವ ಭಾಷೆಯನ್ನು ರಕ್ಷಣೆ ಮಾಡಬೇಕು, ವಿಶ್ವದ ಎಲ್ಲೇ ಇದ್ದರೂ ಕೊಡವಾಮೆ, ನಾಡಿನ ಸಂಬAಧ ಹಾಗೂ ನಮ್ಮತನವನ್ನು ಬಿಡಬಾರದು. ಸಂಸ್ಕೃತಿಯ ಪರಿಪಾ ಲನೆಯೊಂದಿಗೆ ಪರಂಪರೆಯನ್ನು ಮರೆಯಬಾರದು ಎಂದು ಕರೆ ನೀಡಿದರು.
ಕೊಡಗಿನ ಅಭಿವೃದ್ಧಿಗೆ ಎಲ್ಲಾ ಕೊಡವ
ಭಾಷಿಕ ಸಮುದಾಯದವರು ಕೈಜೋಡಿಸಬೇಕು, ಮತದಾನದ (ಮೊದಲ ಪುಟದಿಂದ) ಹಕ್ಕನ್ನು ಕೊಡಗಿನಲ್ಲೇ ಉಳಿಸಿಕೊಳ್ಳಬೇಕೆಂದು ಅವರು ಸಲಹೆಯಿತ್ತರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ವಿಶಿಷ್ಟವಾದ ಕೊಡವ ಸಂಸ್ಕೃತಿ - ಆಚಾರ - ವಿಚಾರಗಳಿಗೆ ಬುನಾದಿ ಹಾಕಿರುವ ಹಿರಿಯರನ್ನು ಸ್ಮರಿಸಿಕೊಳ್ಳುವಂತಾಬೇಕು. ಅಲ್ಲದೆ ಇದರ ಮಹತ್ವವನ್ನು ಅರಿತು ನಡೆಯಬೇಕೆಂದರು. ಕೊಡವಾಮೆರ ಆರ - ಬೇರ (ಮಹತ್ವ) ಏನೆಂಬದರ ಬಗ್ಗೆ ಅವರು ವಿವರಿಸಿದರು.
ಕೊಡವಾಮೆರ ಆರ - ಬೇರ ವಿಷಯದ ಕುರಿತು ಕೀತಿಯಂಡ ಕಾವ್ಯ ಮಂದಪ್ಪ ಪ್ರಬಂಧ ಮಂಡನೆ ಮಾಡಿದರು. ನಾ ಪುಟ್ಟ್ನ ಮಣ್ಣ್ ವಿಷಯದ ಕುರಿತು ಡಾ. ಬೋಡುಕುಟ್ಟಡ ರಾಧಿಕ ಕುಟ್ಟಪ್ಪ ವಿಚಾರ ಮಂಡಿಸಿದರು.
ಕಾರ್ಯಕ್ರಮದಲ್ಲಿ ಉತ್ತಮ ಸೇವೆ - ಸಾಧನೆಗಾಗಿ ಡಾ. ಮಲ್ಲೇಂಗಡ ಲತಾ ಮುತ್ತಣ್ಣ, ಡಾ. ಕಾವಾಡಿಚಂಡ ಮಾದಪ್ಪ, ಡಾ. ಅಜ್ಜಿಕುಟ್ಟಿರ ದೇವಯ್ಯ, ಡಾ. ಅಪ್ಪನೆರವಂಡ ಸೋನಿಯಾ ಮಂದಪ್ಪ, ಡಾ. ಕಂಜಿತAಡ ಬೋಪಣ್ಣ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮೈಸೂರು ಕೊಡವ ಸಮಾಜದ ತಂಡದಿAದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು, ನೃತ್ಯ, ನಾಟಕ, ಹಾಡುಗಾರಿಕೆ ನಡೆಯಿತು. ದಿವಂಗತ ಡಾ. ಕಲಿಯಾಟಂಡ ಬಿ. ಗಣಪತಿ ಅವರಿಗೆ ಸಂತಾಪ ಸೂಚಿಸಲಾಯಿತು.
ವೇದಿಕೆಯಲ್ಲಿ ಶಾಸಕ ಪೊನ್ನಣ್ಣ, ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಕೊಡಗು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊಂಜAಡ ಗಣಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಹಾಗೂ ಕೊಡವ ಅಕಾಡೆಮಿಯ ಅರ್ಥ ಸದಸ್ಯ ಕುಮಾರ್, ರಿಜಿಸ್ಟಾçರ್ ಚಿನ್ನಸ್ವಾಮಿ, ಮೈಸೂರು ನಗರ ಪಾಲಿಕೆಯ ಮಾಜಿ ಸದಸ್ಯ ಮಾಳೇಟಿರ ಸುಬ್ಬಯ್ಯ ಅಕಾಡೆಮಿ ಸದಸ್ಯರುಗಳು ಹಾಜರಿದ್ದರು.
ಅಧ್ಯಕ್ಷರು ತಪ್ಪಡ್‌ಕ ಕಟ್ಟಿ ಪ್ರಾರ್ಥಿಸಿದರು. ಅಕಾಡೆಮಿ ಸದಸ್ಯ ಕೊಂಡಿಜಮ್ಮನ ಎಂ. ಬಾಲಕೃಷ್ಣ ಸ್ವಾಗತಿಸಿ, ಡಯಾನ ಪೂವಯ್ಯ ವಂದಿಸಿದರು. ಚೆಯ್ಯಂಡ ಬನಿತ್ ಬೋಜಣ್ಣ, ಕುಲ್ಲಚಂಡ ಸಹನಾ ದೇಚಮ್ಮ ನಿರೂಪಿಸಿದರು.