ಮಡಿಕೇರಿ, ಆ. ೨೩: ಪಾಡಿಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕಕ್ಕಡ ಮಾಸ ಕಳೆದು ಪರಂಪರೆಯAತೆ ಒಂಬತ್ತು ದಿವಸಗಳ ನಂತರ ಚಿಂಙÁ್ಯರ್ ಪತ್ತಾಂಡ ನಮ್ಮೆ ಸಿಂಹ ಮಾಸದ ಆರಾಧನೆ ತಾ. ೨೬ ರಂದು ಮಂಗಳವಾರ ನಡೆಯಲಿದೆ.
ಕಕ್ಕಡ ತಿಂಗಳಿನಲ್ಲಿ ಸುಮಾರು ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ತುಲಾಭಾರ ಸೇವೆ ಉತ್ಸವಾದಿಗಳು ಪುನಹ ಪ್ರಾರಂಭಗೊಳ್ಳುವುದರೊAದಿಗೆ ಕೊಡಗಿನ ಎಲ್ಲಾ ದೇವಸ್ಥಾನಗಳಲ್ಲಿ ಹಬ್ಬ ಹರಿದಿನಗಳು ಶುರುವಾಗಲು ಮುನ್ನುಡಿಯಾಗುವ ಈ “ಸಿಂಹ ಮಾಸದ ಆರಾಧನೆ” ಪ್ರಾಚೀನ ಕಾಲದ ಹಿನ್ನೆಲೆ ಹೊಂದಿದೆ. ಸಂಪ್ರದಾಯದAತೆ ಆ ದಿನ ದೇವತಕ್ಕರಾದ ಪರದಂಡ ಕುಟುಂಬಸ್ಥರ ಐನ್‌ಮನೆಯಿಂದ ಹಾಗೂ ಪಾಡಿ ಕ್ಷೇತ್ರಕ್ಕೆ ಸಂಬAಧಿಸಿದ ತಕ್ಕ ಕುಟುಂಬಸ್ಥರ ಐನ್ ಮನೆಗಳಿಂದ “ಪಾಲ್ ಬಯ್ಯಾಡ್“ ಆಗಮನವಾಗುತ್ತದೆ.
ದೇವತಕ್ಕರು ಇತರ ತಕ್ಕರೊಂದಿಗೆ ಕೂಡಿ ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ಶ್ರೀ ಅಯ್ಯಪ್ಪ ಕಟ್ಟೆಯ ಮುಂದೆ ಸಂಪ್ರದಾಯದAತೆ ಬಿಳಿ ಕುಪ್ಯ ಧರಿಸಿ “ಪಚ್ಚಿ ಪರಿಯೊ” ಅಥವಾ ಪಿಸುಮಾತಿನ ಪ್ರಾರ್ಥನೆಯೊಂದಿಗೆ ಪಾಡಿ ಕ್ಷೇತ್ರ ವಲ್ಲದೆ ಕೊಡಗಿನ ಎಲ್ಲ ದೇವಸ್ಥಾನ ಗಳಲ್ಲಿ ಹಬ್ಬ ಹರಿದಿನಗಳಿಗೆ ಚಾಲನೆ ದೊರೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಇಗ್ಗುತ್ತಪ್ಪ ದೇವರ ಕೃಪಾಶೀರ್ವಾದಗಳಿಗೆ ಪಾತ್ರರಾಗಲು ದೇವಸ್ಥಾನದ ದೇವತಕ್ಕರಾದ ಪರದಂಡ ಕುಟುಂಬಸ್ಥರು ವಿನಂತಿಸಿದ್ದಾರೆ.