ಮಡಿಕೇರಿ, ಆ. ೨೪: ಔಷಧೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಉದ್ದೇಶಿಸಿರುವ ನೀಟ್-ಪಿಜಿ ರಾಷ್ಟಿçÃಯ ಪರೀಕ್ಷೆಯಲ್ಲಿ ಕೊಡಗಿನವರಾದ ಎನ್.ಆರ್ ತಶ್ವಿನ್ ಅಯ್ಯಪ್ಪ ಅವರು ಆಲ್ ಇಂಡಿಯಾ ರ‍್ಯಾಂಕ್ - ೧೬೨ ಪಡೆಯುವ ಮೂಲಕ ಸಾಧನೆಗೈದಿದ್ದಾರೆ. ಭಾರತದಲ್ಲಿನ ಔಷಧೀಯ ಕಾಲೇಜುಗಳ ಪ್ರವೇಶಕ್ಕೆ ಅತ್ಯಗತ್ಯವಾಗಿರುವ ಹಾಗೂ ಏಕೈಕ ಪರೀಕ್ಷೆ ನೀಟ್ ಆಗಿದ್ದು ಇದರಲ್ಲಿ ತಶ್ವಿನ್ ಅವರು ೮೦೦ ಅಂಕಕ್ಕೆ ೬೫೮ ಅಂಕ ಗಳಿಸಿದ್ದಾರೆ.
ಮೂಲತಃ ಗಡಿಭಾಗ ಬಿರುನಾಣಿ ಗ್ರಾಮದವರಾದ ನೆಲ್ಲೀರ ತಶ್ವಿನ್ ಅಯ್ಯಪ್ಪ, ೫ನೇ ತರಗತಿವರೆಗೆ ಸ್ಥಳೀಯ ಸುಜ್ಯೋತಿ ವಿದ್ಯಾಸಂಸ್ಥೆ ಹಾಗೂ ನಂತರ ಮಡಿಕೇರಿಯ ನವೋದಯ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪೂರೈಸಿದ್ದಾರೆ. ಇವರು ಬಿರುನಾಣಿಯವರಾದ ನೆಲ್ಲೀರ ರಘುನಂದ ಹಾಗೂ ಉತ್ತರೆ (ತಾಮನೆ : ಚೇಂದಿರ) ದಂಪತಿ ಪುತ್ರ