ಚೆಯ್ಯಂಡಾಣೆ, ಆ. ೧೫: ಮಡಿಕೇರಿ ವಲಯ ಎಸ್.ವೈ.ಎಸ್. ವತಿಯಿಂದ ಕೊಟ್ಟಮುಡಿಯಲ್ಲಿ ಇಗ್ನೆöÊಟ್ ಮೀಟ್ ನಾಯಕತ್ವ ಶಿಬಿರ ನಡೆಯಿತು.
ವಲಯ ಅಧ್ಯಕ್ಷ ಅಬ್ದುಲ್ಲ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಕೊಟ್ಟಮುಡಿ ಮರ್ಕಝ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌ವೈಎಸ್ ಜಿಲ್ಲಾಧ್ಯಕ್ಷ ಮುನೀರ್ ಮಹ್ಳರಿ ಉದ್ಘಾಟಿಸಿ ಮಾತನಾಡಿದರು.
ಮರ್ಕಝ್ ವ್ಯವಸ್ಥಾಪಕರಾದ ಇಸ್ಮಾಯಿಲ್ ಸಖಾಫಿ, ಕರ್ನಾಟಕ ರಾಜ್ಯ ಮುಶಾವರ ಸದಸ್ಯ ಶಾದುಲಿ ಫೈಝಿ, ಜಿಲ್ಲಾ ದಅವಾ ಕಾರ್ಯದರ್ಶಿ ಸಂಶುದ್ದಿನ್ ಅಮ್ಜದಿ, ಹನೀಫ್ ರಹ್ಮಾನಿ ಮಾತನಾಡಿದರು. ಅಬೂಬಕ್ಕರ್ ಫೈಝಿ ಕುಂಬಡಾಜೆ ಉ ಉಪನ್ಯಾಸ ನೀಡಿದರು.
ಈ ಸಂದರ್ಭ ದಾನಿಗಳಿಂದ ದೊರೆತ ವೀಲ್ ಚೇರ್, ವಾಟರ್ ಬೆಡ್, ಆಕ್ಸಿಜನ್ ಯಂತ್ರ, ಮತ್ತಿತರ ವಸ್ತುಗಳನ್ನು ಮಡಿಕೇರಿ ಝೋನ್ ಸಮಿತಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಝೋನ್ ಕೋಶಾಧಿಕಾರಿ ಮೊಯ್ದು ಪಡಿಯಾಣಿ ಸೇರಿದಂತೆ ಇನ್ನಿತರರು ಹಾಜರಿದ್ದರು. ಹಸ್ಸನ್ ಸಅದಿ ಸ್ವಾಗತಿಸಿ, ಉನೈಸ್ ಕೊಳಕೇರಿ ವಂದಿಸಿದರು.