ಮಡಿಕೇರಿ, ಆ. ೧೫: ಅಂತರ ರಾಷ್ಟಿçÃಯ ಯುವ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಡಗು ಜಿಲ್ಲೆ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟಿçÃಯ ಯುವ ದಿನಾಚರಣೆ ೨೦೨೫ ಎಚ್.ಐ.ವಿ/ ಏಡ್ಸ್ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸನತ್ ಕುಮಾರ್ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಮತ್ತು ನಿಯಂತ್ರಣ ಘಟಕ ಕೊಡಗು ಇವರು ಎಚ್.ಐ.ವಿ/ ಏಡ್ಸ್ ಕುರಿತು ಎನ್.ಎಸ್.ಎಸ್‌ಎಸ್. ಹಾಗೂ ಆರ್.ಆರ್.ಸಿ. ಸ್ವಯಂಸೇವಕರಿಗೆ ಎಚ್.ಐ.ವಿ./ ಏಡ್ಸ್ನ ಹರಡುವಿಕೆ ಹಾಗೂ ಅದನ್ನು ತಡೆಗಟ್ಟುವಲ್ಲಿ ಯುವಕರ ಹಾಗೂ ಇತರರ ಪಾತ್ರವನ್ನು ವಿದ್ಯಾರ್ಥಿಗಳಿಗೆ ಹಾಗೂ ಎನ್.ಎಸ್.ಎಸ್/ ಆರ್.ಆರ್. ಸಿ. ಸ್ವಯಂಸೇವಕರಿಗೆ ಮನದಟ್ಟು ಮಾಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಸುನಿತಾ ಮುತ್ತಣ್ಣ ಇವರು ಹದಿಹರೆಯದ ಯುವಕರಲ್ಲಿ ಏಡ್ಸ್ ಹರಡುವಿಕೆ ಹಾಗೂ ಅದರಿಂದ ಯಾವ ರೀತಿಯಲ್ಲಿ ಸಂರಕ್ಷಣೆಯನ್ನು ಮಾಡಬೇಕು ಎಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೇಜರ್ ಡಾ. ರಾಘವ ಬಿ, ಪ್ರಾಂಶುಪಾಲ ಇವರು ಅಂತರರಾಷ್ಟಿçÃಯ ಯುವ ದಿನಾಚರಣೆ ಪ್ರಯುಕ್ತ ಸ್ವಯಂಸೇವಕರು ಸಮಾಜದ ಅಭಿವೃದ್ಧಿಗೆ ತಮ್ಮನ್ನು ತೊಡಗಿಸಿ ಕೊಳ್ಳಬೇಕು. ಯುವಕರಲ್ಲಿ ಬದಲಾವಣೆ ಅನಿವಾರ್ಯ ಎಂದು ಹೇಳಿದರು. ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಲಾದ ಭಿತ್ತಿ ಚಿತ್ರ ಸ್ಪರ್ಧೆಯಲ್ಲಿ ಸಮೀನಾ ಪ್ರಥಮ ಸ್ಥಾನ ರೂಪಾಯಿ ಮೂರು ಸಾವಿರ, ಸೋನಿಯಾ ದ್ವಿತೀಯ ಸ್ಥಾನ ಎರಡು ಸಾವಿರ ರೂಪಾಯಿ ಮತ್ತು ಮೋನಿಕಾ ತೃತೀಯ ಸ್ಥಾನ ರೂಪಾಯಿ ಒಂದು ಸಾವಿರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದರು.
ಈ ಕಾರ್ಯಕ್ರಮದಲ್ಲಿ ಎನ್. ಎಸ್.ಎಸ್. ಯೋಜನಾಧಿಕಾರಿ ಅಲೋಕ್ ಬಿಜೈ ಅವರು ಅತಿಥಿಗಳನ್ನು ಸ್ವಾಗತಿಸಿ ಯೋಜನಾಧಿಕಾರಿ ಡಾ. ಶೈಲಶ್ರೀ ಕೆ. ವಂದಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿ ಕವನ ಕಾರ್ಯಕ್ರಮ ನಿರೂಪಿಸಿದರು. ಡಿ.ಎ.ಪಿ.ಸಿ.ಯು. ಸಿಬ್ಬಂದಿಗಳಾದ ಕಮಲ ಮತ್ತು ಉಷಾ ಎಲ್ಲಾ ಆರ್.ಆರ್.ಸಿ., ಎನ್.ಎಸ್.ಎಸ್. ಸ್ವಯಂಸೇವಕರು, ಕಾಲೇಜಿನ ಅಧ್ಯಾಪಕ ಅಧ್ಯಾಪಕೇತರ ವೃಂದದವರು, ವಿದ್ಯಾರ್ಥಿ ನಾಯಕರಾದ ದೀಕ್ಷಿತ್ ಕೆ.ಎಂ, ನಿಶ್ಮಿತಾ ಎಸ್.ಎಂ, ಅನುಶ್ರೀ ಬಿ.ಎಂ, ಪಿ.ಆರ್. ಪ್ರಶಾಂತ್ ಉಪಸ್ಥಿತರಿದ್ದರು.