ಆಗಸ್ಟ್ ೧೬ ಜನ್ಮಾಷ್ಟಮಿ, ಕೃಷ್ಣ ಹುಟ್ಟಿದ ದಿನ. ಕೃಷ್ಣ ಜನ್ಮಾಷ್ಟಮಿ ಲೋಕದ ಅನ್ಯಾಯ, ಅನಾಚಾರ ಅತಿಯಾದಾಗ ಶ್ರೀ ಕೃಷ್ಣ ಅವತಾರವೆತ್ತಿ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಸಂಹಾರ ಮಾಡಿದ. ಭಗವಂತನ ಭರವಸೆಯ ಸಾಕ್ಷಾತ್ಕಾರವೇ ಮತ್ಯಾವತಾರ, ಕೂರ್ಮ, ವರಾಹ, ನರಸಿಂಹ, ವಾಮನ, ಶ್ರೀರಾಮ, ಪರಶುರಾಮ, ಶ್ರೀ ಕೃಷ್ಣ, ಬುದ್ಧ, ಕಲ್ಕಿ ಎಂಬ ದಶಾವತಾರ. ಅವುಗಳಲ್ಲಿ ಪರಿಪೂರ್ಣ ಅವತಾರವೇ ಕೃಷ್ಣಾವತಾರ.

ಶ್ರೀ ಕೃಷ್ಣನ ಜನ್ಮದಿನವಾದ ಶ್ರಾವಣ ಬಹುಳ ಅಷ್ಟಮಿಯನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸುವರು. ಮಹಾವಿಷ್ಣು ದ್ವಾಪರ ಯುಗದಲ್ಲಿ ಎಂಟನೇ ಅವತಾರದ ಶ್ರೀ ಕೃಷ್ಣನ ರೂಪದಲ್ಲಿ ಜನಿಸಿ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವನು.

ಶ್ರೀ ಕೃಷ್ಣ ಮಥುರಾದಲ್ಲಿ ಜನಿಸಿದ. ಮಥುರಾಧಿಪತಿ ಕಂಸನು ತನ್ನ ತಂಗಿ ದೇವಕಿಯನ್ನು ವಸುದೇವನೊಡನೆ ಮದುವೆ ಮಾಡಿಸಿದ. ಅವರನ್ನು ರಥದಲ್ಲಿ ಕರೆತರುವಾಗ ಅಶರೀರವಾಣಿ ಕೇಳಿಸಿತು. ಎಲೈ ಕಂಸನೇ ನಿನ್ನ ತಂಗಿಯ ಮಗನಿಂದಲೇ ನಿನಗೆ ಮೃತ್ಯು ಎಂದು ಹೇಳಿದ್ದು ಕೇಳಿ ಕೋಪಗೊಂಡ ಕಂಸನು ತಂಗಿ ಮತ್ತು ಆಕೆಯ ಗಂಡ ವಸುದೇವನನ್ನು ಸೆರೆಯಲ್ಲಿರಿಸಿದ. ಅವರಿಗೆ ಹುಟ್ಟಿದ ಮಕ್ಕಳನ್ನು ಸೆರೆಯಲ್ಲೇ ಕೊಲ್ಲುತ್ತಾ ಬಂದ. ಆರು ಮಕ್ಕಳನ್ನು ಸಂಹರಿಸಿದ ನಂತರ ಬಲರಾಮ ಹುಟ್ಟಿದಾಗ ರೋಹಿಣಿಯ ಗರ್ಭಕ್ಕೂ ಶ್ರೀ ಕೃಷ್ಣ ಜನಿಸಿದಾಗ ಯಶೋದೆಯ ಮಡಿಲಿಗೂ ಮಗುವನ್ನು ಯಾರಿಗೂ ಗೊತ್ತಾಗದಂತೆ ವರ್ಗಾಯಿಸಿದ. ಕಂಸನಿಗೆ ಇದರ ಅರಿವಿರಲಿಲ್ಲ. ಮಕ್ಕಳಿಬ್ಬರೂ ನಂದಗೋಕುಲದಲ್ಲಿ ಬೆಳೆಯುತ್ತಿದ್ದಾರೆಂಬ ಸುದ್ದಿ ತಿಳಿದಾಗ ಕಂಸನು ಪೂತನಿ, ಧೇನುಕ ಮುಂತಾದ ದೈತ್ಯರನ್ನು ಕಳಿಸಿ ಕೊಲ್ಲಲೆತ್ನಿಸಿದ. ಆದರೆ ಅದು ವಿಫಲವಾಯಿತು. ಶ್ರೀ ಕೃಷ್ಣನೆ ಅವರನ್ನು ಬಿಲ್ಲುಹಬ್ಬದ ನೆಪದಲ್ಲಿ ಕೊಲ್ಲಲೆತ್ನಿಸಿ ಶ್ರೀ ಕೃಷ್ಣ - ಬಲರಾಮರಿಂದ ಹತನಾದ. ಶ್ರೀ ಕೃಷ್ಣನ ಆಪ್ತಮಿತ್ರರು ಸುಧಾಮ - ಕುಚೇಲ, ಕೃಷ್ಣನ ಲೀಲೆಗಳೆಲ್ಲವೂ ಸಾಂಕೇತಿಕವೇ. ಅವನ ಕಾಳಿಂಗ ಮರ್ದನದಿಂದ ಮಾನಸ ಸರೋವರದಲ್ಲಿಯ ದುಷ್ಟಕಾಮನೆಗಳು ಧ್ವಂಸವಾದರೆ ವಜ್ರಗೋಪಿಯು ಭಕ್ತ - ಭಗವಂತ ತಂದೆ - ಮಕ್ಕಳ ಪ್ರೇಮ, ಭಕ್ತಿ ಮತ್ತು ಗೋಪಿಯರು ಅವನನ್ನು ಭಗವಂತ ಎಂದು ನಂಬಿದ್ದರು. ರಮಣ ಮಹರ್ಷಿಗಳು ಕೃಷ್ಣವತಾರ ಪರಿಪೂರ್ಣ ಅವತಾರವೆಂದರು.

ಕಪ್ಪು - ಬಿಳುಪು ಎಂಬ ವರ್ಣ ದ್ವೇಷ ಅಳಿಸಲು ಕಾಮನ ಹಬ್ಬದಂದು ಎಲ್ಲರೂ ಬಣ್ಣದ ಓಕುಳಿಯಾಡಿ ವರ್ಣರಹಿತರಾಗಿ ಐಕ್ಯತಾ ಭಾವದಿಂದ ಬದುಕುವುದನ್ನು ಕಲಿಸಿದ ಶ್ರೀ ಕೃಷ್ಣ ಪರಮಾತ್ಮ ವೈಕುಂಠ ದ್ವಾರಪಾಲಕರಾದ ಜಯ ವಿಜಯರು ಅಧಿಕಾರ ಬಲದಿಂದ ಮತ್ತು ಮದದಲ್ಲಿ ಸಪ್ತಋಷಿಗಳನ್ನು ಅಪಹಾಸ್ಯ ಮಾಡಿ ನಿಂದಿಸಿ ಅವರ ಶಾಪಕ್ಕೆ ಬಲಿಯಾದರು. ನಂತರ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಪರಮಾತ್ಮನ ಮೊರೆಹೋದರು. ಆದರೆ ಕೊಟ್ಟ ಶಾಪ ಹುಸಿಯಾಗದ ಕಾರಣ ಏಳು ವರ್ಷ ನೇರಭಕ್ತಿ ಇಲ್ಲವೇ ಮೂರು ವರ್ಷ ವಿರೋಧ ಭಕ್ತಿ, ಆರಿಸಿಕೊಳ್ಳಲು ಹೇಳಿದರು. ಏಳು ವರ್ಷ ಪರಮಾತ್ಮನನ್ನು ಬಿಟ್ಟು ಇರಲಾರದೆ ಜಯ ವಿಜಯರು ಮೂರು ಜನ್ಮದಲ್ಲಿ ಭಗವಂತನನ್ನು ಸೇರುವ ವಿರೋಧ ಭಕ್ತಿ ಆರಿಸಿಕೊಂಡರು.

ಇದರಿಂದ ಹಿರಣ್ಯಾಕ್ಷ, ಹಿರಣ್ಯಕಶಿಪು, ರಾವಣ, ಕುಂಭಕರ್ಣ, ಶಿಶುಪಾಲ, ದಂತವಕ್ತರAತ ದೈತ್ಯರ ಜನನವಾಯಿತು ಮತ್ತು ಅವರ ಸಂಹಾರಕ್ಕಾಗಿ ಪರಮಾತ್ಮನೆ, ವರಾಹ ನರಸಿಂಹ, ಶ್ರೀ ಕೃಷ್ಣ, ಶ್ರೀರಾಮ ಅವತಾರಗಳು ಉಂಟಾದವು. ಕೃಷ್ಣ ತನ್ನ ಮಾಯಾಜಾಲದಿಂದ ಎಲ್ಲರನ್ನೂ ಸಂಹಾರ ಮಾಡಿದ. ಕೃಷ್ಣ ಜನ್ಮಾಷ್ಟಮಿ ಆಚರಣೆಯು ಇಹ - ಪರ ಸೌಖ್ಯ, ಸಾಮಾಜಿಕ ಐಕ್ಯ, ಸಾಮರಸ್ಯ ತರುವುದು.

- ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ, ಟಿ. ಶೆಟ್ಟಿಗೇರಿ.