ಭಾಗಮಂಡಲ, ಆ. ೧೫: ಭಾಗಮಂಡಲ ಇಲ್ಲಿನ ಶ್ರೀ ಗಜಾನನ ಯುವಕ ಸಂಘದ ವತಿಯಿಂದ ನಾಲ್ಕನೇ ವರ್ಷದ ಅದ್ದೂರಿ ಗಣೇಶೋತ್ಸವಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ತಾ. ೨೭ ರಂದು ಬೆಳಿಗ್ಗೆ ಜಾನ್ ಡಾನ್ಸ್ ಗ್ಯಾಲರಿ ತಂಡದಿAದ ಕುಣಿತ ಭಜನೆಯೊಂದಿಗೆ ಪ್ರತಿಷ್ಠಾಪನಾ ಮೆರವಣಿಗೆ ನಡೆಯಲಿದೆ. ೯:೩೦ಕ್ಕೆ ಮಹಾಪೂಜೆಯೊಂದಿಗೆ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಬಳಿಕ ೧೦ ಗಂಟೆಗೆ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ ವಿವಿಧ ಕಲಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಲಾ ಮಾಣಿಕ್ಯ ಬಿರುದು ಪಡೆದುಕೊಂಡಿರುವ ಪುತ್ತೂರಿನ ಪ್ರಶ್ವಿ ಶೆಟ್ಟಿ ಅವರಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ. ಚೈನೀಸ್ ಕೆನ್ ಪ್ರೊ ಕರಾಟೆ ಡೊ ಇವರ ವತಿಯಿಂದ ಸಾಹಸ ಪ್ರದರ್ಶನ ಆಯೋಜಿಸಲಾಗಿದೆ.
ಸಂಜೆ ೫ ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ, ಭಾಗಮಂಡಲ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಜೋಯಪ್ಪ, ವ್ಯವಸಾಯ ಸೇವಾ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ನಂಜುAಡಪ್ಪ ಜೆ.ಎಸ್., ಠಾಣಾಧಿಕಾರಿ ಶೋಭಾ ಲಮಾಣಿ, ಪದ್ಮ ಕ್ಲಿನಿಕ್ನ ಡಾ. ಮುರಳಿ ಭಟ್, ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ನಿವೃತ್ತ ವ್ಯವಸ್ಥಾಪಕ ಎಸ್.ಎಸ್. ಸಂಪತ್ ಭಟ್, ನಿವೃತ್ತ ನ್ಯಾಯಾಧೀಶ ಸತೀಶ್ ಸಿಂಗ್, ಶ್ರೀರಾಮ ಸೇವಾ ಟ್ರಸ್ಟ್ ಅಧ್ಯಕ್ಷ ಜಯನ್ ಸಿ.ಆರ್., ಕಾವೇರಿ ಆಟೋ ಮಾಲೀಕರ ಸಂಘದ ಅಧ್ಯಕ್ಷ ಹರೀಶ್ ನಿಡ್ಯಮಲೆ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು.
ಭಾಗಮಂಡಲ ನಾಡಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಜೆ ೬ ಗಂಟೆಗೆ ಭಲೆ ತೆಲಿಪಲೆ ಖ್ಯಾತಿಯ ಪುತ್ತೂರಿನ ಟೀಮ್ ಮಕ್ಕರ್ ಸಾಯಿ ದೀಕ್ಷಿತ್ ಅವರಿಂದ ಅರೆ ಭಾಷೆ ಕನ್ನಡ ಹಾಸ್ಯ ಪ್ರದರ್ಶನ ಆಯೋಜಿಸಲಾಗಿದ್ದು, ಬಳಿಕ ಗಣೇಶನ ಮೂರ್ತಿಯನ್ನು ಭವ್ಯ ಅಲಂಕೃತ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ಭಾಗಮಂಡಲದ ರಾಜ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲಾಗುವುದು.