ವೀರಾಜಪೇಟೆ, ಆ. ೧೫: ಇತ್ತೀಚೆಗೆ ನಡೆದ ವೀರಾಜಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಶೀಲರಾದ ಅಮ್ಮಣಿಚಂಡ ಕುಟುಂಬದ ರವಿ ಉತ್ತಪ್ಪ, ಕಾಣತಂಡ ಜಗದೀಶ್, ಅಮ್ಮಣಿಚಂಡ ರತ್ನ ಸುಬ್ರಮಣಿ ಅವರನ್ನು ತಮ್ಮ ಊರಿನಲ್ಲಿ ಸನ್ಮಾನಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕೆ. ಬೊಯಿಕೇರಿ ಕದನೂರು ಗ್ರಾಮ ಪಂಚಾಯಿತಿಯ ಅಮ್ಮಣಿಚಂಡ ಕುಟುಂಬದ ರವಿ ಉತ್ತಪ್ಪ ಅವರು ಅತ್ಯಧಿಕ ಮತಗಳ ಅಂತರದಿAದ ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಅದೇ ಊರಿನ ಕಾಣತಂಡÀ ಜಗದೀಶ್ ಅವರು ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು. ಕ್ರೀಡಾ ಕಾರ್ಯದರ್ಶಿ ಸ್ಥಾನಕ್ಕೆ ಅಮ್ಮಣಿಚಂಡ ರತ್ನ ಸುಬ್ರಮಣಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಈ ಹಿನ್ನೆಲೆ ಗ್ರಾಮದ ಪ್ರಮುಖರು ಈ ಮೂವರು ಸದಸ್ಯರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿ ಅವರು, ತಾನು ಅನೇಕ ಸಂಘಗಳಲ್ಲಿ ಗುರುತಿಸಿಕೊಂಡಿದ್ದು, ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ. ತಾಯಿಯ ಕೈಯಿಂದ ಸನ್ಮಾನ ಮಾಡಿಸಿಕೊಳ್ಳವ ಭಾಗ್ಯ ನನಗೆ ಒದಗಿಬಂದಿದೆ. ಸನ್ಮಾನ ಮಾಡಿ ಮತ್ತಷ್ಟು ಜವಾಬ್ದಾರಿ ಜಾಸ್ತಿ ಮಾಡಿದ್ದೀರ ಎಂದು ಸಂತೋಷ ವ್ಯಕ್ತಪಡಿಸಿದರು.
ಕಾಣತಂಡ ಜಗದೀಶ್ ಮಾತನಾಡಿ, ಚುನಾವಣೆ ಪೂರ್ವದಲ್ಲಿ ತಮಗೆ ನೀಡಿದ ಆಶ್ವಾಸನೆಯನ್ನು ಶಾಸಕರ ಅಭಿಪ್ರಾಯ ಸಂಗ್ರಹಿಸಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಸಲಹೆ ಮೇರೆಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ರತ್ನ ಮಾತನಾಡಿ, ಕೊಡವ ಸಮಾಜದಲ್ಲಿ ತನ್ನ ಕಾರ್ಯವನ್ನು ಮೆಚ್ಚಿ ಮತ್ತೊಂದು ಬಾರಿ ಅವಕಾಶ ನೀಡಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಪ್ರಮುಖರಾದ ಅಮ್ಮಣಿಚಂಡ ಕುಟುಂಬದ ಹಾರುನ್, ದಿಶು ನಂಜಪ್ಪ, ಕಟ್ಟಿ ಬೆಳ್ಯಪ್ಪ, ರಾಜ ನಂಜಪ್ಪ, ಕುಂಚೆಟ್ಟಿರ ವಸಂತ ಹಾಗೂ ಹಿರಿಯರಾದ ಗಂಗಮ್ಮ ಹಾಗೂ ಬೀನ ಹಾಜರಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಹಲವಾರು ಸದಸ್ಯರು ಭಾಗವಹಿಸಿದ್ದರು.