ಪ್ರೀತಿ ಪದಕ್ಕೆ ಸರಿಯಾದ ಅರ್ಥ ಬರುವಂತೆ ಮಾಡಿದವರೆಂದರೆ ರಾಧಾ-ಕೃಷ್ಣರೆನ್ನಬಹುದು. ರಾಧೆ ವಯಸ್ಸಲ್ಲಿ ಕೃಷ್ಣನಿಂದ ದೊಡ್ಡವಳಾದರೂ ಕಲ್ಮಶವಿರದ ಸ್ವಚ್ಛ ಪ್ರೀತಿ ಅವರಿಬ್ಬರಲ್ಲಿತ್ತು. ಪುರಾಣದ ಪ್ರಕಾರ ಭೂಮಿಯಲ್ಲಿ ನಡೆಯುತ್ತಿರುವ ಅನ್ಯಾಯ, ಅಸುರರ ದೌರ್ಜನ್ಯದಿಂದ ಬೇಸತ್ತ ಭೂದೇವಿಯ ಮನವಿಯ ಜೊತೆ ಜಗತ್ತಿಗೆ ಪ್ರೀತಿ, ಧರ್ಮ ಸಂಸ್ಥಾಪನೆಯ ನಿಮಿತ್ತ ವಿಷ್ಣು ಅವತಾರವೆತ್ತುತ್ತಾನೆ.

ಶ್ರೀಮನ್ನಾರಾಯಣನ ಕೋರಿಕೆ ಯಂತೆ ಲಕ್ಷಿ÷್ಮ ಮೊದಲಿಗೆ ಭೂಲೋಕದಲ್ಲಿ ಜನ್ಮತಾಳಲು ಒಪುö್ಪತ್ತಾಳೆ. ಅದರಂತೆ ‘ನೀವು ಯಾವಾಗ ಜನಿಸಿ ನನ್ನ ಕಣ್ಣೆದುರು ಬರುವಿರೋ ಆ ದಿನ ಕಣ್ಣು ಬಿಡುವೆನೆಂದು’ ವಿಷ್ಣುವಿಗೆ ಹೇಳಿ ಭೂಮಿಯಲ್ಲಿ ಅವತಾರವೆತ್ತಲು ಯಮುನಾ ನದಿ ತೀರದಲ್ಲಿ ದೊಡ್ಡ ಕಮಲದ ಒಳಗೆ ಜನಿಸುತ್ತಾಳೆ. ಆಗ ಅಲ್ಲಿ ವಾಸವಿದ್ದ ವೃಷಭಾನುವೆಂಬ ಯಾದವನೊಬ್ಬ ದೇವರ ವರಪ್ರಸಾದವೆಂದು ಮಗುವನ್ನು ಮಡದಿಗೆ ಕೊಟ್ಟು ಮಗುವಿಗೆ ರಾಧ ಎಂದು ಹೆಸರಿಟ್ಟು ಸಾಕುತ್ತಾನೆ. ರಾಧೆಗೆ ಐದು ವರುಷವಾದರೂ ಆಕೆ ಕಣ್ಣು ಬಿಟ್ಟಿರದ್ದರಿಂದ ಅವರಿಬ್ಬರೂ ದು:ಖಿತರಾಗುತ್ತಾರೆ. ಇದೇ ಸಮಯ ದಲ್ಲಿ ಕಾರಾಗೃಹದಲ್ಲಿದ್ದ ವಸುದೇವ-ದೇವಕಿಯ ಮಗನಾಗಿ ವಿಷ್ಣುವು ಕೃಷ್ಣನಾಗಿ ಜನಿಸಿ ನಂದರಾಜ-ಯಶೋಧೆಯರ ಮಡಿಲಲ್ಲಿ ಬೆಳೆಯು ತ್ತಿರುತ್ತಾನೆ. ಒಮ್ಮೆ ನಂದರಾಜ ಕುಟುಂಬ ಸಮೇತ ವೃಷಭಾನು ಮನೆಗೆ ಭೇಟಿ ನೀಡುವ ಸಂದರ್ಭ ಕೃಷ್ಣನು ರಾಧೆಯ ಬಳಿ ಬಂದಾಗ ಆಕೆ ಕಣ್ಣು ಬಿಟ್ಟು ಅವನನ್ನು ನೋಡುತ್ತಾಳೆ. ಲಕ್ಮಿಯು ವಿಷ್ಣುವಿನಲ್ಲಿ ಮಾಡಿದ ಒಪ್ಪಂದದAತೇ ನೆರವೇರುತ್ತದೆ. ಗೋಕುಲದಲ್ಲಿ ಕೃಷ್ಣ ತುಂಟಾಟವಾಡುತ್ತಾ ಗೋಪಿಕೆಯರ ಮನಕದ್ದು ಬೆಳೆಯುತ್ತಿರಲು ಕಂಸ ಕಳುಹಿಸುತ್ತಿದ್ದ ಎಲ್ಲಾ ಅಸುರರನ್ನು ವಧಿಸುತ್ತಾನೆ. ಮುಂದೆ ಕಂಸನ ಸಂಹಾರಕ್ಕಾಗಿ ಬೃಂದಾವನ ತೊರೆದು ಮಥುರೆಗೆ ಹೊರಡುವ ಸಂದರ್ಭ ಎದುರಾಗುತ್ತದೆ. ಅತಿ ದು:ಖಿತಳಾದ ಪ್ರೀತಿಪಾತ್ರ ರಾಧೆಯನ್ನು ಸಮಾ ಧಾನಿಸುತ್ತಾ ಕೃಷ್ಣನು, ನಾವಿಬ್ಬರು ಪರಸ್ಪರ ಒಬ್ಬರಿಗಾಗಿ ಒಬ್ಬರು ಜನ್ಮತಾಳಿದವರು.

ನಮ್ಮಿಬ್ಬರದು ದೇಹವೆರಡಾದರೂ ಆತ್ಮ ಒಂದೇ. ಆತ್ಮದ ಬೆಸೆಯು ವಿಕೆಯಿಂದ ಇಬ್ಬರೂ ಒಬ್ಬರಲ್ಲೊಬ್ಬರು ಅಂತರAಗದಲ್ಲಿ ಅನುರಕ್ತರಾಗಿದ್ದೇವೆ ಎನ್ನುತ್ತಾ, ಅವಳಿಗಾಗಿ ಕೊಳಲ ಗಾನಸುಧೆ ಹರಿಸಿ ಸಮರ್ಪಿಸುತ್ತಾನೆ. ಆಕೆಗೆ ಗೊತ್ತಿದೆ ತನ್ನ ಕೃಷ್ಣ ಇನ್ನೆಂದೂ ಬೃಂದಾವನಕ್ಕೆ ಹಿಂತಿರುಗಲಾರನೆAದು. ಆದರೆ ಕೃಷ್ಣ ಕಾರಾಗೃಹದಲ್ಲಿದ್ದ ಅವನ ತಂದೆ-ತಾಯಿಯನ್ನು ಬಿಡಿಸಲು ಕಂಸನ ವಧೆ ಅನಿವಾರ್ಯವಾದ್ದರಿಂದ ಅವನನ್ನು ಕಳುಹಿಸಿಕೊಡುತ್ತಾಳೆ.

ಮಥುರಾದಲ್ಲಿ ಕಂಸನನ್ನು ವಧಿಸಿ ಕಂಸನ ತಂದೆ ಉಗ್ರಸೇನನನ್ನು ರಾಜನನ್ನಾಗಿ ಮಾಡುತ್ತಾನೆ. ಜರಾಸಂದನು ತನ್ನ ಅಳಿಯ ಕಂಸನನ್ನು ಕೊಂದ ಕೃಷ್ಣನ ಮೇಲೆ ಸೇಡಿಟ್ಟುಕೊಂಡು ಆಗಾಗ್ಗೆ ಮಥುರಾಕ್ಕೆ ದಾಳಿ ಮಾಡುತ್ತಾ ಕಿರುಕುಳ ಕೊಡುತ್ತಿದ್ದ. ಇದನ್ನು ತಪ್ಪಿಸಲು ಪ್ರಜೆಗಳನ್ನು ಕಾಪಾಡಲು ಕೃಷ್ಣ ದ್ವಾರಕೆಯನ್ನು ಸಮುದ್ರ ಮಧ್ಯೆಯಲ್ಲಿ ನಿರ್ಮಿಸಿ ದ್ವಾರಕಾಧೀಶನಾಗುತ್ತಾನೆ. ರುಕ್ಮಿಣಿ, ಸತ್ಯಭಾಮ, ಜಾಂಬವತಿಯ ರನ್ನು ವಿವಾಹವಾದರೂ ಆತ ನಿದ್ದೆಯಲ್ಲೂ ರಾಧೆಯನ್ನು ಕನವರಿಸುತ್ತಿರುತ್ತಾನೆ. ಈ ಬಗ್ಗೆ ಒಂದು ಬಾರಿ ರುಕ್ಮಿಣಿಯು ರಾಧೆಯ ಬಗ್ಗೆ ಕೃಷ್ಣನನ್ನು ಪ್ರಶ್ನೆ ಮಾಡಿದಾಗ ನೀನು ಒಮ್ಮೆ ಆಕೆಯನ್ನು ಭೇಟಿ ಮಾಡು ನಿನಗೆಲ್ಲವೂ ತಿಳಿಯುತ್ತದೆ ಎನ್ನುತ್ತಾನೆ. ಹಾಗೆಯೇ ಆಕೆಯನ್ನು ಭೇಟಿ ಮಾಡಲು ಹೋದಾಗ ಏನಾದರೂ ತೆಗೆದು ಕೊಂಡು ಹೋಗೆಂದು ಹೇಳುತ್ತಾನೆ. ಅಂದೇ ರಾತ್ರಿ ರಾಧೆಯನ್ನು ಭೇಟಿ ಮಾಡಿದ ರುಕ್ಮಿಣಿ, ತೆಗೆದುಕೊಂಡು ಬಂದಿದ್ದ ಬಿಸಿ ಹಾಲಿನ ಲೋಟವನ್ನು ಕೊಟ್ಟು ಕೃಷ್ಣ ನಿನಗಾಗಿ ಕಳುಹಿಸಿದ್ದಾನೆ ಎನ್ನುತ್ತಾಳೆ. ಕೃಷ್ಣನ ಹೆಸರು ಕೇಳಿದ ಕೂಡಲೇ ಸ್ವಲ್ಪವೂ ಯೋಚಿಸದ ರಾಧೆ ಬಿಸಿ ಹಾಲನ್ನು ಕುಡಿಯುತ್ತಾಳೆ. ಅಷ್ಟು ಬಿಸಿ ಹಾಲನ್ನು ಕುಡಿದರೂ ಆಕೆಗೆ ಯಾವುದೇ ನೋವಾಗದ್ದಕ್ಕೆ ಅಚ್ಚರಿಪಡುತ್ತಾ ರುಕ್ಮಿಣಿ ಸ್ವಲ್ಪ ಹೊತ್ತು ಅಲ್ಲಿದ್ದು ಅರಮನೆಗೆ ಹಿಂತಿರುಗುತ್ತಾಳೆ. ಕೃಷ್ಣನಿಗೆ ನಡೆದದ್ದನ್ನೆಲ್ಲ ಹೇಳುತ್ತಿರುವಾಗ ಅವಳ ದೃಷ್ಠಿ ಕೃಷ್ಣನ ಕಾಲಿನ ಮೇಲೆ ಬೀಳುತ್ತದೆ. ಪಾದದ ತುಂಬೆಲ್ಲ ಸುಟ್ಟಗಾಯಗಳಿರುವುದನ್ನು ಕಂಡು ವಿಚಾರಿಸಿದಾಗ ಕೃಷ್ಣನು, ‘ನೀನು ಕೊಟ್ಟ ಬಿಸಿ ಹಾಲನ್ನು ಕುಡಿಯುತ್ತಿರು ವಾಗಲೂ ರಾಧೆ ನನ್ನನ್ನೇ ನೆನೆಯುತ್ತಾ ಮನದಲ್ಲೇ ಪಾದ ಪೂಜೆ ಮಾಡುತ್ತಿದ್ದಳು. ಹಾಗಾಗಿ ಅವಳ ಕಾಲಿಗೆ ಬರಬೇಕಾದ ಬೊಬ್ಬೆಗಳು ನನಗೆ ಬಂತೆAದು’ ಹೇಳುತ್ತಾನೆ. ಇದನ್ನು ಕೇಳಿದ ಆಕೆಗೆ ರಾಧಾ ಕೃಷ್ಣರ ಪ್ರೇಮ ಎಂತದ್ದು ಎಂದು ಆಕೆಗೆ ಅರ್ಥವಾಗುತ್ತದೆ.

ರಾಧೆ ವಿವಾಹವಾಗಿದ್ದರೂ ತನ್ನ ಕೊನೆಯ ಉಸಿರಿರುವವರೆಗೂ ಕೃಷ್ಣನನ್ನು ತನ್ನ ಹೃದಯದಲ್ಲಿಟ್ಟು ಪೂಜಿಸುತ್ತಿರುತ್ತಾಳೆ. ಇಬ್ಬರೂ ದೂರದೂರದಲ್ಲಿದ್ದರೂ ಅವರಿಬ್ಬರ ನಿಷ್ಕಳಂಕ ಪ್ರೀತಿಯನ್ನು ಅಳೆಯುವ ಶಕ್ತಿ ಯಾರಿಗೂ ಇರುವುದಿಲ್ಲ. ಒಮ್ಮೆ ರಾಧೆ ಕೆಲ ಸಮಯ ದ್ವಾರಕೆಯಲ್ಲಿ ಕಾಲಕಳೆಯಲು ಬಂದವಳು ಕೃಷ್ಣನ ಸೇವೆ ಮಾಡುತ್ತಿರುತ್ತಾಳೆ. ಅದೊಂದು ಬಾರಿ ಕೃಷ್ಣನಿಗೆ ವಿಪರೀತ ತಲೆನೋವು ಕಾಣಿಸಿಕೊಂಡಾಗ ಆತನ ಪತ್ನಿಯರೆಲ್ಲರೂ ಚಿಂತಿತರಾಗುತ್ತಾರೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ನಾರದರು ಹೇ ಪ್ರಭೂ.. ನಿಮ್ಮ ತಲೆನೋವಿಗೆ ಪರಿಹಾರವೇನೆಂದು’ ಕೇಳುತ್ತಾನೆ. ಆಗ ಕೃಷ್ಣನು ಪ್ರಿಯ ಮಡದಿಯರಲ್ಲಿ ಯಾರಾದರೂ ಒಬ್ಬರು ತಮ್ಮ ಪಾದದ ಧೂಳನ್ನು ನನ್ನ ಹಣೆಗೆ ಹಚ್ಚಬೇಕು ಹಾಗೆ ಮಾಡಿದಲ್ಲಿ ತಲೆಶೂಲೆ ವಾಸಿಯಾಗುವುದು, ಅದೇ ರೀತಿ ಯಾರು ಹಚ್ಚುವರೋ ಅವರ ಪಾಪ-ಪುಣ್ಯಗಳೆರಡು ನನಗೆ ಬರುವುದೆಂದು ಹೇಳುತ್ತಾನೆ. ರುಕ್ಮಿಣಿ ಸೇರಿ ಇತರ ಪತ್ನಿಯರು ನರಕ ಪ್ರಾಪ್ತವಾಗುವುದು ಬೇಡವೆಂದು ಯಾರೂ ಹಚ್ಚಲು ಮುಂದಾಗದಾಗ ವಿಷಂiÀi ತಿಳಿದ ರಾಧೆ ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಕೃಷ್ಣನೇ ಮುಖ್ಯನೆಂದು ತನ್ನ ಪಾದದ ಧೂಳನ್ನು ಹಚ್ಚಿದಾಗ ಕೃಷ್ಣನ ನೋವು ಶಮನವಾಗುತ್ತದೆ. ಇದು ಆಕೆ ಕೃಷ್ಣನ ಮೇಲಿಟ್ಟಿರುವ ಅದಮ್ಯ ಪ್ರೀತಿಯನ್ನು ಸಾಬೀತುಗೊಳಿಸುತ್ತದೆ. ಕೆಲಸಮಯ ಕಳೆದು ರಾಧೆ ಅಲ್ಲಿಂದ ದೂರ ಹೊರಟು ಹೋಗುತ್ತಾಳೆ. ಒಂದು ದಿನ ತನ್ನ ಅಂತ್ಯ ಸಮೀಪಿಸಿತೆಂದು ಅರಿವಾದಾಗ ಕೃಷ್ಣನನ್ನು ನೆನೆಯುತ್ತಾಳೆ. ಕೃಷ್ಣ ಎಲ್ಲವನ್ನು ತನ್ನ ದಿವ್ಯದೃಷ್ಠಿಯಿಂದ ಅರಿತು ರಾಧೆ ಇರುವಲ್ಲಿ ಓಡೋಡಿ ಬಂದು ಅವಳ ಕೊನೆಯ ಕೋರಿಕೆಯಂತೆ ತನ್ನ ಕೊಳಲನ್ನು ಊದಿ ಅವಳಿಷ್ಟ ನೆರವೇರಿಸುತ್ತಾನೆ. ಕೊಳಲನಾದ ಕೇಳುತ್ತಾ ರಾಧೆ ಅಸುನೀಗಿದಾಗ ದು:ಖಿತನಾದ ಕೃಷ್ಣ ಅವಳ ಬಳಿಯೇ ತನ್ನ ಕೊಳಲನ್ನು ತ್ಯಜಿಸುತ್ತಾನೆ. ಆ ನಂತರ ಅವನೆಂದೂ ಕೊಳಲ ನ್ನೂದುವುದಿಲ್ಲ. ಅವರಿಬ್ಬರದು ನಿಷ್ಕಾಮ ಅಗೋಚರ ಪ್ರೀತಿಯಾಗಿತ್ತು.

- ಕುಕ್ಕುನೂರು ರೇಷ್ಮ ಮನೋಜ್,

ಕುಶಾಲನಗರ.