ಕುಶಾಲನಗರ, ಆ. ೧೪: ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆ ಸಂಘದ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಶಾಲೆಯ ಶತಮಾನೋತ್ಸವ ಅಂಗವಾಗಿ ಭವನ ನಿರ್ಮಾಣ ಮಾಡುವ ಸಂಬAಧ ಚರ್ಚೆ ನಡೆದು ಸರಕಾರದಿಂದ ಅನುದಾನ ಪಡೆಯಲು ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ತೀರ್ಮಾನ ಕೈಗೊಳ್ಳಲಾಯಿತು.

ಶತಮಾನೋತ್ಸವ ಕಟ್ಟಡ ನಿರ್ಮಾಣ ಮಾಡುವ ಸಂಬAಧ ಸ್ಥಳದಲ್ಲಿರುವ ಹಳೆಯ ಕಟ್ಟಡ ತೆರವುಗೊಳಿಸಲು ಇಲಾಖೆಯಿಂದ ಅನುಮತಿ ಲಭಿಸಿದ ಬಗ್ಗೆ ಚರ್ಚಿಸಲಾಯಿತು. ೨೦೨೫ರ ಆಗಸ್ಟ್ ೧೫ ರಂದು ಸಂಜೆ ೪:೩೦ಕ್ಕೆ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಸಂಘದ ಸದಸ್ಯತ್ವ ಆಂದೋಲನಕ್ಕೆ ಚಾಲನೆ ಕೊಡಲು ನಿರ್ಣಯ ಕೈಗೊಳ್ಳಲಾಯಿತು.

ಸಂಘದ ಖಜಾಂಚಿ ಎಸ್.ಕೆ. ಸತೀಶ್ ಉಪಾಧ್ಯಕ್ಷರಾದ ಎಂ.ವಿ. ನಾರಾಯಣ, ಕಾರ್ಯದರ್ಶಿ ಎಂ.ಇ. ಮೋಹಿದೀನ್, ಸಹ ಕಾರ್ಯದರ್ಶಿ ಕೆ.ಎನ್. ದೇವರಾಜ್ ಮತ್ತು ಸಂಘದ ಪದಾಧಿಕಾರಿಗಳು ಇದ್ದರು.