ಗೋಣಿಕೊಪ್ಪಲು, ಆ. ೧೪: ಮಡಿಕೇರಿ ಪ್ರಾದೇಶಿಕ ವಿಭಾಗದ ಸಂಪಾಜೆ ವಲಯದ ದಬ್ಬಡ್ಕ-ಯು. ಚೆಂಬು ಗ್ರಾಮದಲ್ಲಿ ಆಗಸ್ಟ್ ೬ರಂದು ಕೊಪ್ಪದ ಶಿವಪ್ಪ ಎಂಬುವರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆಹಿಡಿಯಲು ಅನುಮತಿ ನೀಡಿ, ವನ್ಯಜೀವಿ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧೀಕೃತ ಆದೇಶ ಜಾರಿಗೊಳಿಸಿದ್ದಾರೆ.

ಸೆರೆ ಹಿಡಿದ ಪುಂಡಾನೆಯನ್ನು ಮಡಿಕೇರಿ ವಿಭಾಗದ ವ್ಯಾಪ್ತಿಗೆ ಬರುವ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲು ಆದೇಶದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಪುಂಡಾನೆಯನ್ನು ಸೆರೆ ಹಿಡಿದು ರೆಡಿಯೋ ಕಾಲರ್ ಅಳವಡಿಸಲು ಅನುಮತಿ ನೀಡಲಾಗಿತ್ತು. ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣನವರು ಪ್ರಕರಣದ ಗಂಭೀರತೆಯನ್ನು ಅರಣ್ಯ ಇಲಾಖೆ ಸಚಿವರಿಗೆ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಿವರಿಸಿದ್ದರು. ಅಲ್ಲದೆ ರೇಡಿಯೋ ಕಾಲರ್ ಅಳವಡಿಕೆಯ ಬದಲು ಕಾಡಾನೆಯನ್ನು ಸೆರೆ ಹಿಡಿಯಲೇ ಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದರು.

ಶಾಸಕರ ಹಾಗೂ ಅರಣ್ಯ ಮಂತ್ರಿಗಳ ಶಿಫಾರಸ್ಸಿನಂತೆ ಇದೀಗ ಚೆಂಬು ಗ್ರಾಮದಲ್ಲಿರುವ ಪುಂಡಾನೆಯನ್ನು ಸೆರೆ ಹಿಡಿಯಲು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ನೀಡಿದ್ದಾರೆ. ಪುಂಡಾನೆ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೇಲಾಧಿಕಾರಿಗಳ ಆದೇಶಕ್ಕಾಗಿ ಎದುರು ನೋಡುತ್ತಿದ್ದರು. ಇದೀಗ ಆದೇಶ ಜಾರಿಯಾಗುತ್ತಿದ್ದಂತೆಯೇ ಪುಂಡಾನೆ ಸೆರೆಗೆ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ದಬ್ಬಡ್ಕ ಗ್ರಾಮದಲ್ಲಿರುವ ರೈತರಾದ ಶಿವಪ್ಪ ಎಂಬವರು ತಮ್ಮ ಮನೆಯ ಬಳಿ ರಾತ್ರಿ ೮.೩೦ರ ಸುಮಾರಿಗೆ ಜೋರಾಗಿ ಸದ್ದಾಗುತ್ತಿರುವುದನ್ನು ಗಮನಿಸಿ ಮನೆಯ ಹೊರ ಭಾಗಕ್ಕೆ ಆಗಮಿಸಿದ ವೇಳೆ ಮನೆಯ

(ಮೊದಲ ಪುಟದಿಂದ) ಬಳಿ ಇದ್ದ ಪುಂಡಾನೆಯೊAದು ಶಿವಪ್ಪನವರ ಮೇಲೆ ದಿಢೀರ್ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸಂಪಾಜೆ ವಲಯದ ಚೆಂಬು ಗ್ರಾಮ ಪಂಚಾಯಿತಿಯ ದಬ್ಬಡ್ಕ, ಕಲ್ಲಳ್ಳ, ಯು.ಚೆಂಬು ಗ್ರಾಮಗಳ ಆನೆಹಳ್ಳ, ಕಾಂತಬೈಲು, ಊರುಬೈಲು, ಮಾರ್ಪಡ್ಕ, ನಿಡಿಂಜಿ, ಕೊಪ್ಪ, ನಡುಬೆಟ್ಟು, ಕದಂಬಾಡಿ, ಹೊದ್ದೆಟ್ಟಿ ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿAದ ಕಾಡಾನೆಯ ಹಾವಳಿ ಮಿತಿ ಮೀರಿತ್ತು. ಈ ಭಾಗದಲ್ಲಿರುವ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲು ಆರಂಭದಲ್ಲಿ ಇಲಾಖೆಯು ಅನುಮತಿ ನೀಡಿತ್ತು. ಇದೀಗ ಈ ಅನುಮತಿಯನ್ನು ಮಾರ್ಪಡಿಸಿ ರೇಡಿಯೋ ಕಾಲರ್ ಬದಲಾಗಿ ಆನೆ ಹಾವಳಿಯನ್ನು ತಪ್ಪಿಸಲು ನಿರ್ದಿಷ್ಟವಾಗಿ ಗುರುತಿಸಿ ಪುಂಡಾನೆಯನ್ನು ಸೆರೆ ಹಿಡಿಯಲು ಸೂಚನೆ ನೀಡಿ ಆದೇಶ ಮಂಜೂರಾಗಿದೆ. -ಹೆಚ್.ಕೆ.ಜಗದೀಶ್