ಗೋಣಿಕೊಪ್ಪಲು, ಆ. ೧೪: ವೀರಾಜಪೇಟೆ ಮಂಡಲ ಬಿಜೆಪಿ, ನಗರ ಮಂಡಲ, ಬಿಜೆಪಿ ಯುವ ಮೋರ್ಚ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ನಗರದಲ್ಲಿ ಹರ್ ಘರ್ ತಿರಂಗಾ ಯಾತ್ರೆ ನಡೆಯಿತು.

ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಭಾರತದಿಂದ ಬೇರ್ಪಟ್ಟ ಪ್ರದೇಶಗಳನ್ನು ಒಂದುಗೂಡಿಸಿ ಅಖಂಡ ಭಾರತ ನಿರ್ಮಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು. ದೇಶದ ಪ್ರತಿ ನಾಗರಿಕ ದೇಶಾಭಿಮಾನವನ್ನು ಮೆರೆಯಬೇಕು. ತ್ರಿವರ್ಣ ಧ್ವಜ ರಾಷ್ಟಾçಭಿಮಾನದ ಸಂಕೇತವಾಗಿದೆ. ಈ ಕಾರ್ಯಕ್ರಮದ ಮೂಲಕ ದೇಶಾಭಿಮಾನ ಬಿತ್ತುವ ಕೆಲಸ ನಡೆಯುತ್ತಿದೆ. ದೇಶ ಭಕ್ತರು ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಿರುವುದು ಪ್ರಶಂಸನೀಯ. ದೇಶಕ್ಕೆ ಸಂಚಕಾರ ತಂದೊಡ್ಡಿದ್ದ ದುಷ್ಟಶಕ್ತಿಗಳನ್ನು ಸದೆಬಡಿಯುವ ನಿಟ್ಟಿನಲ್ಲಿ ಭಾರತೀಯ ಸೇನೆ ‘ಅಪರೇಷನ್ ಸಿಂಧೂರ’ ಕೈಗೊಂಡಿತು. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ದಿಟ್ಟ ಹೆಜ್ಜೆಗಳು ದೇಶದ ಭದ್ರತೆಗೆ ಸಹಕಾರಿಯಾಗಿದೆ. ಹರಿದು ಹಂಚಿಹೋಗಿರುವ ಭಾರತದ ಅಖಂಡತೆ ಮರುಸ್ಥಾಪನೆಗೆ ಎಲ್ಲರೂ ಒಂದಾಗಬೇಕೆAದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್‌ಕುಮಾರ್ ಮಾತನಾಡಿ, ‘ಹರ್ ಘರ್ ತಿರಂಗಾ ಯಾತ್ರೆ’ಯನ್ನು ಪ್ರತಿವರ್ಷ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ದೇಶಾಭಿಮಾನವನ್ನು ಉದ್ದೀಪನಗೊಳಿಸಲು ಈ ಯಾತ್ರೆ ಸಹಕಾರಿಯಾಗಿದೆ ಎಂದರು.

ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ನಾಮೇರ ಮೊಣ್ಣಪ್ಪ, ಒಬಿಸಿ ಮೋರ್ಚದ ತಾಲೂಕು ಅಧ್ಯಕ್ಷ ಪೊಟ್ಟಂಡ ನವೀನ್ ಉತ್ತಯ್ಯ, ಬಿಜೆಪಿ ಒಬಿಸಿ ಮೋರ್ಚದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಪೂಜಾರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

(ಮೊದಲ ಪುಟದಿಂದ)

ಗಮನ ಸೆಳೆದ ತಿರಂಗ ಯಾತ್ರೆ

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ನಗರದ ಮುಖ್ಯ ಬೀದಿಯಲ್ಲಿ ಸಾಗಿದ ತಿರಂಗ ಯಾತ್ರೆ ಗಮನ ಸೆಳೆಯಿತು.

ಸುಮಾರು ೩೦೦ ಮೀಟರ್ ಉದ್ದದ ರಾಷ್ಟç ಧ್ವಜವನ್ನು ಹಿಡಿದು ಜಯಘೋಷಗಳನ್ನು ಮೊಳಗಿಸುತ್ತ ಉಮಾಮಹೇಶ್ವರಿ ದೇವಾಲಯ ತನಕ ಸಾಗಿತು.

ಧ್ವಜವನ್ನು ಹಿಡಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮುಖ್ಯ ರಸ್ತೆಯಲ್ಲಿ ಸಾಗಿ ಬರುತ್ತಿದ್ದಂತೆಯೇ ನಗರದಲ್ಲಿದ್ದ ದೇಶಭಕ್ತರು ಯಾತ್ರೆಗೆ ಶುಭ ಕೋರಿ ಪುಷ್ಪಾರ್ಚನೆಗೈದರು. ಯಾತ್ರೆ ಆರಂಭದಲ್ಲಿ ಮಳೆರಾಯ ಬಿಡುವು ನೀಡಿತ್ತಾದರೂ ಯಾತ್ರೆಯೂ ಬಸ್ ನಿಲ್ದಾಣ ತಲುಪುತ್ತಿದ್ದಂತೆ ಮಳೆ ಆರಂಭವಾಯಿತು. ಮಳೆ ನಡುವೆಯೆ ವಿದ್ಯಾರ್ಥಿಗಳು ರಾಷ್ಟç ಧ್ವಜವನ್ನು ಹಿಡಿದು ಹೆಜ್ಜೆ ಹಾಕಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ನಾಗರಿಕರು ಸುಂದರ ದೃಶ್ಯವನ್ನು ಕಣ್ತುಂಬಿಕೊAಡರು.

ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ, ಪಕ್ಷದ ಪ್ರಮುಖರುಗಳಾದ ರಾಜ್ಯ ಕೃಷಿ ಮೋರ್ಚಾ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ರಾಜ್ಯ ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್ ,ಮಾಜಿ ಒಲಂಪಿಯನ್ ಬಾಳೆಯಡ ಸುಬ್ರಮಣಿ, ಪ್ರಮುಖರಾದ ಕುಂಞAಗಡ ಅರುಣ್ ಭೀಮಯ್ಯ, ಕುಟ್ಟಂಡ ಅಜಿತ್ ಕರುಂಬಯ್ಯ, ಚೆಪ್ಪುಡೀರ ರಾಕೇಶ್, ಮೂಕೊಂಡ ಶಶಿ ಸುಬ್ರಮಣಿ, ವಿವಿಧ ಗ್ರಾಮ ಪಂಚಾಯಿತಿಯ ಸದಸ್ಯರುಗಳು, ವಿವಿಧ ಮೋರ್ಚದ ಪದಾಧಿಕಾರಿಗಳು ಹಾಜರಿದ್ದರು.

ಗೋಣಿಕೊಪ್ಪ ವೃತ್ತ ನಿರೀಕ್ಷP ಶಿವರಾಜ್ ಮುಧೋಳ್ ಮುಂದಾಳತ್ವದಲ್ಲಿ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದರು.