ಮಡಿಕೇರಿ, ಆ. ೧೪: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಪುನಶ್ಚೇತನಕ್ಕೆ ಕಾಫಿ ಮಂಡಳಿ ವತಿಯಿಂದ ಸಹಕಾರ ನೀಡುವಂತೆ ಕೋರಿ ಸಂಘದ ಪದಾಧಿಕಾರಿಗಳು ಇಂದು ಕಾಫಿ ಮಂಡಳಿ ಅಧ್ಯಕ್ಷರು ಹಾಗೂ ಸಿಇಓ ಅವರಿಗೆ ಮನವಿ ಸಲ್ಲಿಸಿ ಚರ್ಚಿಸಿದರು.

ಬೆಂಗಳೂರಿನ ಕಾಫಿ ಮಂಡಳಿ ಕಚೇರಿಯಲ್ಲಿ ಮಂಡಳಿ ಅಧ್ಯಕ್ಷ ದಿನೇಶ್ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೂರ್ಮರಾವ್ ಅವರನ್ನು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹಾಗೂ ಪದಾಧಿಕಾರಿಗಳು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಕಾಫಿ ಬೆಳೆಗಾರರ ಸಂಘ ಹಾಗೂ ಕಾಫಿ ಮಂಡಳಿ ನಡುವೆ ಇರುವ ವ್ಯವಹಾರ ಹಾಗೂ ಸಂಘದಿAದ ಮಂಡಳಿಗೆ ಪಾವತಿಸಲು ಬಾಕಿ ಇರುವ ಬಡ್ಡಿಯನ್ನು ಮನ್ನಾ ಮಾಡಲು ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಈ ಸಂದರ್ಭ ವಿನಂತಿಸಲಾಯಿತು. ಇದಲ್ಲದೆ ಮುಂದೆ ಸಂಘದ ವತಿಯಿಂದ ಸಂಘದ ಪುನಶ್ಚೇತನ ಹಾಗೂ ಅಭಿವೃದ್ಧಿಯ ಕುರಿತಾಗಿ ಕೆಲವೊಂದು ಯೋಜನೆಗಳನ್ನು ರೂಪಿಸಲು ಕಾಫಿ ಮಂಡಳಿಯಿAದ ಅಗತ್ಯ ಸಹಕಾರ ನೀಡುವಂತೆಯೂ ರವಿಕಾಳಪ್ಪ ಹಾಗೂ ಪದಾಧಿಕಾರಿಗಳು ಮನವಿ ಮಾಡಿದರು.

ಇದಕ್ಕೆ ಅಧ್ಯಕ್ಷರು ಹಾಗೂ ಸಿಇಓ ಅವರು ಪೂರಕವಾಗಿ ಸ್ಪಂದಿಸಿ ಸಹಕರಿಸುವ ಆಶ್ವಾಸನೆಯಿತ್ತರು. ಈ ಸಂದರ್ಭದಲ್ಲಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಮಂಡಳಿಯಿAದ ಅಗತ್ಯ ಸಹಕಾರ ನೀಡುವಂತೆಯೂ ರವಿಕಾಳಪ್ಪ ಹಾಗೂ ಪದಾಧಿಕಾರಿಗಳು ಮನವಿ ಮಾಡಿದರು.

ಇದಕ್ಕೆ ಅಧ್ಯಕ್ಷರು ಹಾಗೂ ಸಿಇಓ ಅವರು ಪೂರಕವಾಗಿ ಸ್ಪಂದಿಸಿ ಸಹಕರಿಸುವ ಆಶ್ವಾಸನೆಯಿತ್ತರು. ಈ ಸಂದರ್ಭದಲ್ಲಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ಸಂಘದ ಉಪಾಧ್ಯಕ್ಷ ಸುರೇಶ್ ಮಾಯಮುಡಿ, ನಿರ್ದೇಶಕರುಗಳಾದ ತಾಕೇರಿ ಪೊನ್ನಪ್ಪ, ಹೊಸೂರು ಸತೀಶ್, ರಾಬಿನ್ ದೇವಯ್ಯ, ಕಾಕೂರು ಸಂದೀಪ್, ಸಂಘದ ಉಪಕಾರ್ಯದರ್ಶಿ ದೇಚಮ್ಮ, ವ್ಯವಸ್ಥಾಪಕರಾದ ನಾಣಯ್ಯ ಹಾಜರಿದ್ದರು.