ಮಡಿಕೇರಿ, ಆ. ೧೧: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯಿಂದ ಸೆಪ್ಟೆಂಬರ್ ೨೩ ರಿಂದ ಅಕ್ಟೋಬರ್ ೨ರವರೆಗೆ ನಗರದಲ್ಲಿ ಆಯೋಜಿತ ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು, ಕಲಾತಂಡಗಳಿAದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.

ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೆ.೨೩ ರಿಂದ ಅ. ೨ ರವರೆಗೆ ದಸರಾ ಸಾಂಸ್ಕೃತಿಕ ಸಮಿತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಕಲಾವಿದರು, ಕಲಾತಂಡಗಳು ತಾವು ಪ್ರದರ್ಶಿಸುವ ಕಲಾ ಪ್ರಕಾರ, ಪಾಲ್ಗೊಳ್ಳುವ ಕಲಾವಿದರ ಸಂಖ್ಯೆ, ಅಪೇಕ್ಷಿತ ದಿನಾಂಕ, ಮೊಬೈಲ್ ಸಂಖ್ಯೆಯೊAದಿಗಿನ ವಿಳಾಸವನ್ನು ಆUರೊಳಗಾಗಿ ಅಧ್ಯಕ್ಷರು, ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ, ಮಡಿಕೇರಿ ನಗರ ದಸರಾ ಸಮಿತಿ ಕಛೇರಿ, ನಗರಸಭಾ ಸಂಕೀರ್ಣ, ಮುಖ್ಯರಸ್ತೆ, ಮಡಿಕೇರಿ - ೫೭೧೨೦೧ ಈ ವಿಳಾಸಕ್ಕೆ ತಲುಪಿಸಬೇಕು. ಅಥವಾ mಚಿಜiಞeಡಿiಜಚಿsಚಿಡಿಚಿ@gmಚಿiಟ.ಛಿom ಇಮೇಲ್ ಮೂಲಕ ಕಳುಹಿಸಬಹುದು. ಅರ್ಜಿ ಸಲ್ಲಿಸುವ ಕೊನೇ ದಿನಾಂಕದ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಕಲಾಪ್ರದರ್ಶನದ ಆಯ್ಕೆಯಲ್ಲಿ ದಸರಾ ಸಾಂಸ್ಕೃತಿಕ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಒAದು ಕಲಾತಂಡಕ್ಕೆ , ಕಲಾವಿದರಿಗೆ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ೧೧ ದಿನಗಳ ಪೈಕಿ ಒಂದು ಬಾರಿ ಮಾತ್ರ ಪ್ರದರ್ಶನ ನೀಡಲು ಅವಕಾಶ ಇದೆ ಎಂದು ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.೯೯೭೨೫೩೮೫೮೪, ೮೭೬೨೧೧೦೯೪೮ ಸಂಪರ್ಕಿಸಬಹುದೆAದು ತಿಳಿಸಿದ್ದಾರೆ.

Àಸ್ಟ್ ೨೫