ಟಿ ಹೆಚ್.ಜೆ. ರಾಕೇಶ್

ಮಡಿಕೇರಿ, ಆ. ೧೧ : ವಾಹನಗಳ ಭದ್ರತೆ, ಕಳ್ಳತನಗಳನ್ನು ತಡೆಗಟ್ಟುವುದು ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಸುಲಭವಾಗಿ ಪತ್ತೆಹಚ್ಚುವ ನಿಟ್ಟಿನಲ್ಲಿ ವಾಹನಗಳಿಗೆ ಕಡ್ಡಾಯವಾಗಿ ಹೆಚ್.ಎಸ್.ಆರ್.ಪಿ. (ಹೈ ಸೆಕ್ಯೂರಿಟಿ ರಿಜಿಸ್ಟೆçÃಷನ್ ಪ್ಲೇಟ್) ಅಳವಡಿಸಬೇಕೆಂಬ ಆದೇಶಕ್ಕೆ ಜಿಲ್ಲೆಯಲ್ಲಿ ನಿರಾಸಕ್ತಿ ತೋರುತ್ತಿರುವುದು ಎದ್ದು ಕಾಣುತ್ತಿದೆ. ೪೭,೦೩೭ ವಾಹನಗಳು ಫಲಕವನ್ನು ಅಳವಡಿಸದೆ ಸಂಚರಿಸುತ್ತಿವೆ ಎಂಬ ಅಂಶ ಇದೀಗ ಹೊರಬಿದ್ದಿದೆ.

ಜಿಲ್ಲೆಯಲ್ಲಿ ೨೦೧೯ಕ್ಕೂ ಮುನ್ನ ನೋಂದಣಿಗೊAಡಿದ್ದ ಒಟ್ಟು ೨,೪೮,೬೦೮ ವಾಹನಗಳ ಪೈಕಿ ೧,೩೮,೭೯೦ ಹೊಸದಾಗಿ ಹೆಚ್‌ಎಸ್‌ಆರ್‌ಪಿಯಾಗಿದ್ದು, ೬೨,೭೮೧ ವಾಹನ ೨೦೧೯ರಿಂದ ಈಚೆಗೂ ನೋಂದವಣಿಯಾಗಿರುವ ಕಾರಣದಿಂದ ಮತ್ತೊಮ್ಮೆ ಹೆಚ್‌ಎಸ್‌ಆರ್‌ಪಿ ಪ್ರಕ್ರಿಯೆ ಮಾಡಬೇಕಾಗಿರಲಿಲ್ಲ. ಇದನ್ನು ಹೊರತುಪಡಿಸಿ ಇನ್ನೂ ಕೂಡ ೪೭,೦೩೭ ವಾಹನಗಳು ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಬಾಕಿ ಉಳಿದುಕೊಂಡಿದೆ. ೨೦೧೯ರ ಏಪ್ರಿಲ್ ೧ರ ಹಿಂದೆ ನೋಂದಣಿಗೊAಡÀ ವಾಹನಗಳಿಗೆ ಈ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿ ಅನ್ವಯವಾಗುತ್ತಿದೆ.

೨೦೨೩ರಲ್ಲಿ ಕೇಂದ್ರ ಸರಕಾರ ನೂತನ ಭದ್ರತಾ ತಂತ್ರಜ್ಞಾನ ಹೊಂದಿರುವ ‘ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್’ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಹೆಚ್‌ಎಸ್‌ಆರ್‌ಪಿ ಅಳವಡಿಸುವಂತೆ ೨೦೨೩ರಿಂದ ಈವರೆಗೂ ೭ ಬಾರಿ ಗಡುವು ವಿಸ್ತರಿಸಲಾಗಿತ್ತು. ಕಾಲಾವಕಾಶ ನೀಡಿದರೂ ವಾಹನ ಸವಾರರು ನಿರ್ಲಕ್ಷö್ಯ ತೋರುತ್ತಿರುವುದು ಕಂಡುಬರುತ್ತಿದೆ. ಆರಂಭದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೊರತೆ, ವೆಬ್‌ಪೋರ್ಟಲ್‌ನಲ್ಲಿ ಸರ್ವರ್ ತೊಂದರೆ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಹಲವು ಬಾರಿ ಅಳವಡಿಕೆಗೆ ಅವಧಿ ವಿಸ್ತರಿಸಿತ್ತು.

ಈ ಹಿಂದೆ ವಿವಿಧ ವಿನ್ಯಾಸ, ಶೈಲಿಗಳ ಹಾಗೂ ಅಕ್ಷರ-ಸಂಖ್ಯಾ ಶೈಲಿಗಳುಳ್ಳ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ಅವಕಾಶವಿತ್ತು. ಈ ಕಾರಣದಿಂದಾಗಿ ಕೆಲವೊಂದು ನಂಬರ್ ಪ್ಲೇಟ್‌ಗಳಲ್ಲಿ ಸಂಖ್ಯೆ ಹಾಗೂ ಅಕ್ಷರಗಳು ಸ್ಪಷ್ಟವಾಗಿ ಗೋಚರವಾಗುತ್ತಿರಲಿಲ್ಲ. ಇದನ್ನು ತಡೆಗಟ್ಟಲು ‘ಐಎನ್‌ಡಿ’ ಮಾದರಿಯ ಒಂದೇ ಸಂಖ್ಯಾ-ಅಕ್ಷರ ಶೈಲಿವುಳ್ಳ ನಂಬರ್ ಪ್ಲೇಟ್‌ಗಳನ್ನು ಮಾತ್ರ ಬಳಸುವಂತೆ ಸರಕಾರ ಸೂಚಿಸಿತ್ತು. ನಂತರ ಇದರ ಬದಲು ‘ಹೈ ಸೆಕ್ಯೂರಿಟಿ ರಿಜಿಸ್ಟೆçÃಷನ್ ಪ್ಲೇಟ್’ ಬಳಕೆ ಕಡ್ಡಾಯಗೊಳಿಸಿತು.

೧,೬೨೭ ಮಾತ್ರ ನೋಂದಣಿ

೨೦೨೫ರ ಮಾರ್ಚ್ನಿಂದ ಜುಲೈ ಅಂತ್ಯದ ತನಕ ಕೇವಲ ೧,೬೨೭ ವಾಹನಗಳು ಮಾತ್ರ ಹೆಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿವೆ.

ಮಾರ್ಚ್ ಅಂತ್ಯಕ್ಕೆ ಒಟ್ಟು ೧,೩೭,೧೬೩ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಅಳವಡಿಕೆಯಾಗಿತ್ತು, ೪೮,೬೬೪ ವಾಹನಗಳು ಬಾಕಿ ಇದ್ದವು. ಗಡುವು ನೀಡಿಯೂ ಹೆಚ್‌ಎಸ್‌ಆರ್‌ಪಿ ಅಳವಡಿಸದ ವಾಹನಗಳಿಗೆ ಪೊಲೀಸ್ ಇಲಾಖೆ ದಂಡದ ಬಿಸಿ ಮುಟ್ಟಿಸುತ್ತಿದೆ. ರೂ. ೫೦೦ ರಿಂದ ೧ ಸಾವಿರ ತನಕ ದಂಡ ವಿಧಿಸಲಾಗುತ್ತಿದೆ.

ಆನ್‌ಲೈನ್ ನೋಂದಣಿ ಹೇಗೆ?

ಆನ್‌ಲೈನ್ ಮೂಲಕ ಹೆಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಲು ಅವಕಾಶವಿದೆ. ತಿತಿತಿ. siಚಿm.iಟಿ ವೆಬ್‌ಸೈಟ್ ಮೂಲಕ ಹೆಚ್‌ಎಸ್‌ಆರ್‌ಪಿ ಪಡೆಯಬಹುದಾಗಿದೆ. ಈ ವೆಬ್‌ಸೈಟ್‌ನಲ್ಲಿ ಊSಖP ಆಯ್ಕೆಯನ್ನು ಒತ್ತಿದರೆ ವಾಹನ ನೋಂದಣಿ ಕಾರ್ಡ್ನ ವಿವರ, ಮಾಲೀಕರ ಮಾಹಿತಿ ಹಾಗೂ ಮೊಬೈಲ್ ನಂಬರ್ ನೀಡಿದ್ದಲ್ಲಿ ಮೊಬೈಲ್‌ಗೆ ‘ಓಟಿಪಿ’ ಬರುತ್ತದೆ. ಅದನ್ನು ತಂತ್ರಾAಶದಲ್ಲಿ ದಾಖಲಿಸಿದರೆ ಹತ್ತಿರದ ವಾಹನ ಸಂಸ್ಥೆಯ ಅಧಿಕೃತ ವಾಹನ ಮಾರಾಟಗಾರರ ವಿವರವನ್ನು ನೀಡುತ್ತದೆ. ಅನುಕೂಲಕರ ಮಾರಾಟಗಾರರನ್ನು ಆಯ್ಕೆ ಮಾಡಿ ನಿಗದಿತ ಮೊತ್ತವನ್ನು ಆನ್‌ಲೈನ್ ಮೂಲಕವೇ ಪಾವತಿಸಿದಲ್ಲಿ ತಂತ್ರಾAಶದಲ್ಲಿ ನೋಂದಣಿಯಾದ ನಂಬರ್ ಪ್ಲೇಟ್ ಅನ್ನು ವಾಹನಕ್ಕೆ ಅಳವಡಿಸಿಕೊಳ್ಳಬಹುದಾಗಿದೆ.