ಸೌರಭ ಸಂಗೀತ ನೃತ್ಯ ಕಲಾ ಪರಿಷತ್ (ರಿ) ಭಾರತೀಯ ಶಾಸ್ತಿçÃಯ ನೃತ್ಯ ಮತ್ತು ಸಂಗೀತವನ್ನು ಉತ್ತೇಜಿಸಲು ೧೯೯೧-೯೨ರಲ್ಲಿ ಕೊಡಗಿನಲ್ಲಿ ಸ್ಥಾಪಿತವಾಯಿತು. ಭರತನಾಟ್ಯದಲ್ಲಿ ಮಕ್ಕಳಿಗೆ ತರಬೇತಿ ನೀಡುವುದರ ಜೊತೆಗೆ, ವಿವಿಧ ಶಾಸ್ತಿçÃಯ ನೃತ್ಯ ಶೈಲಿಗಳ ಪರಿಚಯ ಮತ್ತು ಉತ್ತೇಜನ ಇದರ ಪ್ರಮುಖ ಉದ್ದೇಶವಾಗಿತ್ತು. ಈ ಸಂಸ್ಥೆ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿದೆ.

ಕಲಾ ಚಿಂತಕಿ ಶಾರದ ರಾಮನ್ ಹಾಗೂ ಕೆ. ರಾಮನ್ ದಂಪತಿಗಳು ತಮ್ಮ ಮಕ್ಕಳಾದ ಡಾ. ಶ್ರೀವಿದ್ಯಾ ಹಾಗೂ ಶ್ರೀಧನ್ಯರ ಕಲಾ ಪ್ರಯತ್ನ ಹಾಗೂ ಸೇವೆ ಕೊಡಗಿನಲ್ಲಿ ಊರ್ಜಿತವಾಗಲು ಉಚಿತವೆಂಬAತೆ ಸೌರಭ ಕಲಾ ಪರಿಷತನ್ನು ಸ್ಥಾಪಿಸಿ ತಮ್ಮನ್ನು ಅದರಲ್ಲಿ ತೊಡಗಿಸಿಕೊಂಡರು.

ಡಾ. ಶ್ರೀವಿದ್ಯಾ, ಪರಿಷತ್‌ನ ಪ್ರಾಂಶುಪಾಲೆ, ಬಾಲ್ಯದಿಂದಲೇ ನೃತ್ಯ ಕ್ಷೇತ್ರದಲ್ಲಿ ಅಪೂರ್ವ ಪ್ರತಿಭೆಯನ್ನು ತೋರಿದವರು. ಮೈಸೂರಿನ ಶ್ರೀ ಶ್ರೀಕಂಠದತ್ತ ಒಡೆಯರ್‌ರಿಂದ ೮ನೇ ವಯಸ್ಸಿನಲ್ಲಿ ಚಿನ್ನದ ಪದಕ ಪಡೆದ ಅವರು, ಭರತನಾಟ್ಯ, ಕೂಚಿಪುಡಿ, ಓಡಿಸ್ಸಿ ಸೇರಿದಂತೆ ಹಲವು ಶಾಸ್ತಿçÃಯ ನೃತ್ಯ ಶೈಲಿಗಳಲ್ಲಿ ರಾಜ್ಯ ಹಾಗೂ ರಾಷ್ಟçಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ದೂರದರ್ಶನ ಚಂದನದ ಂ ಗ್ರೇಡ್ ಕಲಾವಿದೆ, ಸಂಸ್ಕೃತಿ ಸಚಿವಾಲಯದ ಜೂನಿಯರ್ ಫೆಲೋಶಿಪ್ ಪುರಸ್ಕೃತರು ಮತ್ತು ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ವಿಜೇತರು. ಜೊತೆಗೆ, ಅತೀ ಕಿರಿಯ ವಯಸ್ಸಿನಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಪಡೆದ ಸಾಧಕರೂ ಹೌದು.

ಡಾ. ಶ್ರೀವಿದ್ಯಾ ಹಾಗೂ ವಿದೂಷಿ ಶ್ರಿಧನ್ಯಾ ಎಂಬ ಸಹೋದರಿಯರು ತಮ್ಮ ಲಾಸ್ಯ, ಭಾವವ್ಯಕ್ತಿಯ ಶ್ರೇಷ್ಠತೆಗೆ “ಕೊಡಗಿನ ಸಹೋದರಿಯರು” ಎಂದೇ ಪ್ರಸಿದ್ಧರಾಗಿದ್ದಾರೆ. ವಿದೂಷಿ ಶ್ರಿಧನ್ಯಾ, ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಭಾರತದೆಲ್ಲೆಡೆ ಪ್ರದರ್ಶನ ನೀಡಿದ್ದಾರೆ. ಅವರು ಸ್ಥಾಪಿಸಿದ ಸೌರಭ ಕಲ್ಚರಲ್ ಅಂಡ್ ಚಾರಿಟೆಬಲ್ ಫೌಂಡೇಶನ್ ಮೂಲಕ ಇಂಗ್ಲೆAಡಿನಲ್ಲಿ ೫ ವರ್ಷ, ಈಗ ಜರ್ಮನಿಯಲ್ಲಿ ೭ ವರ್ಷಗಳಿಂದ ನೃತ್ಯ ಶಾಲೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಸೌರಭ ಕುಟುಂಬವು ಕೊಡಗಿನಿಂದ ಮಂಗಳೂರಿಗೆ ಸ್ಥಳಾಂತರವಾದಾಗ, ಪರಿಷತ್ ಮಂಗಳೂರಿನAತಹ ಪಕ್ಕದ ಜಿಲ್ಲೆಯಲ್ಲಿ ಭರತನಾಟ್ಯವನ್ನು ಹರಡುವ ಉದ್ದೇಶದಿಂದ ತನ್ನ ಶಾಖೆಯನ್ನು ಅಲ್ಲಿಯೂ ಸ್ಥಾಪಿಸಿತು. ಇಂದಿನ ದಿನಗಳಲ್ಲಿ, ಮಂಗಳೂರು ಶಾಖೆಯು ಶಿಸ್ತಿನ ಬೆಳವಣಿಗೆಯೊಂದಿಗೆ ಬೆಳೆದು, ಗುರು ಡಾ. ಶ್ರೀವಿದ್ಯಾರವರ ಮಾರ್ಗದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು ನೃತ್ಯವನ್ನು ಅರ್ಥಪೂರ್ಣವಾಗಿ ಕಲಿಯುತ್ತಿದ್ದಾರೆ.

ಇದೇ ಸಂಸ್ಥೆಯ ವಿದ್ಯಾರ್ಥಿನಿ ರೆಮೋನಾ ಇತ್ತೀಚೆಗೆ ೧೭೦ ಗಂಟೆಗಳ ನಿರಂತರ ನೃತ್ಯ ಮಾಡಿ ವಿಶ್ವ ದಾಖಲೆ ಮಾಡಿದರು. ೭ ದಿನಗಳ ನಿರಂತರ ನೃತ್ಯ ಪಯಣ ಮಾಡುವುದು ಅಷ್ಟೊಂದು ಸುಲಭವಲ್ಲ. ಅದರ ಹಿಂದಿನ ಪರಿಶ್ರಮಗಳ ನೆನಪನ್ನು ಮೆಲುಕು ಹಾಕುವುದೇ ರೋಮಾಂಚನಕಾರಿ. ಮಂಗಳೂರಿನಲ್ಲಿ ನಡೆದ ಈ ಸಂಭ್ರಮದ ತಯಾರಿಯೇ ಒಂದು ಕೌತುಕಮಯ.

ಸೌರಭ ಸಂಸ್ಥೆಯ ಶಿಸ್ತಿನ ಶಿಷ್ಯೆಯ ಸಾಧನೆ

೧೭೦ ಗಂಟೆಗಳ ನಿರಂತರ ನೃತ್ಯದ ವಿಶ್ವ ದಾಖಲೆ

ದಿನಾಂಕ ೨೧-೦೭-೨೦೨೫ರ ಪೂರ್ವಾಹ್ನ ೧೦ ಗಂಟೆಗೆ ಪ್ರಾರಂಭಗೊAಡ ನೃತ್ಯ ಯಜ್ಞವು, ದಿನಾಂಕ ೨೮-೦೭-೨೦೨೫ರ ಅಪರಾಹ್ನ ೧೨:೩೦ಕ್ಕೆ ವಿಜೃಂಭಣೆಯಿAದ ಸಂಪನ್ನವಾಯಿತು.

ಈ ನೂರ ಎಪ್ಪತ್ತು ಗಂಟೆಗಳ - ಅಂದರೆ ನಿರಂತರ ಏಳು ದಿನಗಳ - ಕಾಲ ಅವಿರತವಾಗಿ ನಡೆದ ಈ ಕಲಾ ತಪಸ್ಸಿನಲ್ಲಿ, ಪ್ರೇಕ್ಷಕರ ಸಮುದಾಯವು ತಂಡೋಪತAಡವಾಗಿ ಭಾಗವಹಿಸಿ ಕಲಾವಿದೆಗೆ ಉತ್ಸಾಹ ತುಂಬುವ ಒಂದು ಶ್ರೇಷ್ಠ ಕಾರ್ಯ ನಿರ್ವಹಿಸಿತು. ವಿಶೇಷವಾಗಿ ಆಕೆ ಓದುತ್ತಿರುವ ಸೈಂಟ್ ಅಲೋಶಿಯಸ್ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಅವಿಭಾಜ್ಯ ಅಂಗವಾಗಿ ರಾತ್ರಿ ವೇಳೆ, ಉಪಸ್ಥಿತರಿದ್ದು ರೆಮೋನಾಳಿಗೆ ಪ್ರೋತ್ಸಾಹಿಸಿದರು.

೪ ದಿನವೂ ಕಾಲೇಜಿನ ಸಾವಿರ ಸಾವಿರ ಮಕ್ಕಳು ಬಂದು ನಿದ್ದೆ, ನೀರು ಬಿಟ್ಟು ಈ ಚಾಲೆಂಜ್‌ಗೆ ಸಾಥ್ ನೀಡಿದರು.

ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ನೃತ್ಯಪಟು ರೆಮೋನಾಳಿಗೆ ನಡೆಯುತ್ತಿದ್ದ ವೈದ್ಯಕೀಯ ತಪಾಸಣೆ, ಫಿಸಿಯೋಥೆರಪಿ, ದೈಹಿಕ ಮಸಾಜ್, ಸಾತ್ವಿಕ ಆಹಾರದ ಸೇವನೆ, ಆಂಬ್ಯುಲೆನ್ಸ್ ಸೇವೆಯ ವ್ಯವಸ್ಥೆ ಇತ್ಯಾದಿ ಸೂಕ್ಷö್ಮತೆಯ ವಿಷಯಗಳಲ್ಲಿ ಸಂತ ಅಲೋಶಿಯಸ್ ಸಂಸ್ಥೆ ಅತ್ಯಂತ ಜವಾಬ್ದಾರಿಯಿಂದ ನಿರ್ವಹಣೆ ನಡೆಸಿ ತನ್ನ ಸಾಂಸ್ಕೃತಿಕ ನಿಷ್ಠೆ ಹಾಗೂ ತಾತ್ಪರ್ಯವನ್ನು ಮೆರೆಯಿತು.

ಈ ವೇಳೆ, ದೈಹಿಕ ಬಾಧೆಗಳ ನಿರ್ವಹಣೆ, ಸ್ನಾನ, ಬಟ್ಟೆ ಬದಲಾವಣೆ ಮುಂತಾದ ಎಲ್ಲಾ ವೈಯಕ್ತಿಕ ಅಗತ್ಯಗಳನ್ನು ಸಹ ಕಲಾವಿದೆ ಪ್ರತಿ ಹದಿನೈದು ನಿಮಿಷಗಳ ವಿರಾಮ ಸಮಯದಲ್ಲಿ ಸಮರ್ಥವಾಗಿ ನಿಭಾಯಿಸಬೇಕಿತ್ತು. ಈ ಎಲ್ಲದರಿಂದಾಗಿ ಈ ಸಾಧನೆಯು ಕೇವಲ ಕಲೆಯದೇ ಅಲ್ಲ, ಅವಿಸ್ಮರಣೀಯ ಶಿಸ್ತು ಮತ್ತು ಸಮರ್ಪಣೆಯ ಮಹಾಸಾಕ್ಷಿಯಾಗಿ ಉಳಿಯಿತು.

೧೭೦ ಗಂಟೆಗಳ ಭರತನಾಟ್ಯ ಸಾಧನೆಯು ವೈಭವಶಾಲಿ ವೇಷಭೂಷಣ ವಿಲ್ಲದೆ, ಆದರೆ ಅತ್ಯಂತ ಶ್ರದ್ಧಾ, ಶಿಸ್ತು ಮತ್ತು ತಪಸ್ಸಿನಿಂದ ಪೂರ್ತಿಯಾಯಿತು. ಚಾಲೆಂಜಿನ ಮೊದಲ ದಿನ ಚಿಲಂಕೆ (ಅಥವಾ ಗೆಜ್ಜೆ / ಘುಂಗುರು) ಧರಿಸಿ ಪ್ರಾರಂಭಿಸಿದ ರೆಮೋನಾ, ಉಳಿದ ದಿನಗಳಲ್ಲಿ ಸರಳವಾದ ವೇಷದಲ್ಲೇ ನೃತ್ಯ ಸಾಧನೆ ಮುಂದುವರೆಸಿದಳು.

ಇದು ಕೇವಲ ದೇಹಾರಾಧನೆ ಅಲ್ಲ, ಆತ್ಮಾರಾಧನೆಯ ಯಾನವಾಗಿತ್ತು. ಕೊನೆಯ ದಿನ, ತಮ್ಮ ಯಜ್ಞವನ್ನು ಸಮರ್ಪಕವಾಗಿ ಸಂಪನ್ನಗೊಳಿಸುವ ಸಂದರ್ಭದಲ್ಲಷ್ಟೇ ಅವರು ಮತ್ತೊಮ್ಮೆ ಚಿಲಂಕೆಯನ್ನು ಕಟ್ಟಿದರು - ಅದು ಸಮರ್ಪಣೆಯ, ತಪಸ್ಸಿನ, ಜಯದ ಸಂಕೇತವಾಯಿತು.

ರೆಮೋನಾಳ ೧೭೦ ಗಂಟೆಗಳ ನೃತ್ಯಸಾಧನೆಗೆ ಅವಿಚಲ ಲಯ ನೀಡಲು, ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಡಾ. ಶ್ರೀವಿದ್ಯಾ ಅವರ ಸೌರಭ ಕಲಾ ಪರಿಷತ್ತಿನ ಶಿಷ್ಯರು ಸಹ ನಿರಂತರವಾಗಿ ಸಭಾ ಭವನದಲ್ಲಿ ಹಗಲು-ರಾತ್ರಿ ನಟ್ಟುವಾಂಗA ಸಹಕಾರ ನೀಡುತ್ತಾ ಕುಳಿತ್ತಿದ್ದರು. ಈ ಶ್ರದ್ಧೆಯ ತಾಳಮೇಳವೇ ರೆಮೋನಾಳ ಕಾಲಚಲನೆಗೆ ಶಕ್ತಿ ಮತ್ತು ಸದೃಢತೆ ನೀಡಿತು.

ನಿದ್ರೆ ತಲೆಕೆತ್ತುವಂತಾಗುತ್ತಿ ದ್ದಾಗಲೂ, ಸೌರಭಕಲಾ ಪರಿಷತ್ತಿನ ಶಿಷ್ಯರು, ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ರೆಮೋನಾಳ ಸ್ನೇಹಿತರು ಪ್ರತಿ ಹೆಜ್ಜೆಯಲ್ಲೂ ಅವಳ ಜೊತೆ ಕುಣಿದರು - ಅವಳಿಗೆ ಶಕ್ತಿಯ ಪೂರೈಕೆ ಮಾಡಿ, ಅವಳ ದೃಷ್ಟಿಯನ್ನು ಗುರಿಯ ಕಡೆಗೆ ಕೇಂದ್ರೀಕರಿಸಲು ನೆರವಾಗಿದರು.

ಈ ಮಹತ್ವದ ಭರತನಾಟ್ಯ ಚಾಲೆಂಜನ್ನು ಯಶಸ್ವಿಯಾಗಿ ನೆರವೇರಿಸಲು ಅಗತ್ಯವಿದ್ದ ಎಲ್ಲಾ ತಾಂತ್ರಿಕ ಹಾಗೂ ವೃತ್ತಿಪರ ವ್ಯವಸ್ಥೆಗಳನ್ನು ಸಂತ ಅಲೋಶಿಯಸ್ ಮಹಾ ವಿದ್ಯಾಲಯ ಅತ್ಯಂತ ನಿಖರವಾಗಿ ಮಾಡಿತ್ತು. ಬೆಳಕು, ಧ್ವನಿ, ನಿಕಟ ಮೇಲ್ವಿಚಾರಣೆ, ವೈದ್ಯಕೀಯ ತಪಾಸಣೆ, ಪ್ರಸಾರ ವ್ಯವಸ್ಥೆ ಮುಂತಾದ ಎಲ್ಲಾ ಸೂಕ್ಷ್ಮ ಅಂಶಗಳ ನಿರ್ವಹಣೆಯಲ್ಲಿ ಈ ಮಹಾವಿದ್ಯಾಲಯವು ಅತ್ಯಂತ ಪ್ರಮುಖ ಪಾತ್ರವಹಿಸಿತು.

ಅಮೇರಿಕಾ ಆಧಾರಿತ ಸಂಸ್ಥೆಯಾದ ಉoಟಜeಟಿ ಃooಞ oಜಿ ಖeಛಿoಡಿಜs ಇದರ ಅಇಔ ಮನೀಷ್ ಅವರು, ಈ ಮಹಾಯಜ್ಞದ ಅಂತಿಮ ದಿನದ ಪ್ರದರ್ಶನವನ್ನು ಕಣ್ಣಾರೆ ನೋಡುವ ಸಲುವಾಗಿ ಗ್ರೇಟರ್ ನೋಯ್ಡಾದಿಂದ ಆಗಮಿಸಿದರು. ಈ ಉತ್ಕೃಷ್ಟ ಸಾಧನೆಯು ಇತಿಹಾಸದಲ್ಲಿ ದಾಖಲಾಗಬೇಕೆಂಬ ಉದ್ದೇಶದಿಂದ ಅವರು ಸ್ವತಃ ಹಾಜರಾಗಿ ಸಾಕ್ಷಿಯಾದರು.

ಚಾಲೆಂಜಿನ ಸಮಯದಲ್ಲಿ ಸುಮಾರು ಐದು ಕ್ಯಾಮೆರಾಗಳು ಹಗಲು-ರಾತ್ರಿ ನಿರಂತರವಾಗಿ ವೀಡಿಯೋ ದಾಖಲೆ ಮಾಡುತ್ತಿದ್ದು, ಈ ದೃಶ್ಯಗಳನ್ನು ಉoಟಜeಟಿ ಃooಞ oಜಿ ಖeಛಿoಡಿಜs ಸಂಸ್ಥೆಯ ಸಿಬ್ಬಂದಿಗಳು ನೇರವಾಗಿ ವೀಕ್ಷಿಸುತ್ತಿದ್ದರು. ಈ ತಪಸ್ಸಿನ ಪ್ರತಿಯೊಂದು ಕ್ಷಣವೂ ದಾಖಲಾಗುವಂತೆ ಎಲ್ಲಾ ಕ್ರಮಗಳನ್ನು ಅನುಸರಿಸಲಾಯಿತು.

ಕೊಡಗಿನಲ್ಲಿ ಹುಟ್ಟಿ ಮಂಗಳೂರಿನಲ್ಲಿ ಬೆಳೆದು ಶಿಷ್ಯೆಯನ್ನು ವಿಶ್ವ ದಾಖಲೆಯತ್ತ ತಲುಪಿಸಿದ ಸಂತೃಪ್ತಿ ಸೌರಭ ಕಲಾ ಬಳಗಕ್ಕೆ.

- ಸೌರಭ ಶಿಷ್ಯೆಯರು.