ಶ್ರೀಮಂಗಲ, ಆ. ೧೦: ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಕಕ್ಕಡ ನಮ್ಮೆಯನ್ನು ಆಚರಿಸ ಲಾಯಿತು. ಕಕ್ಕಡ ಖಾದ್ಯಗಳ ಪ್ರದರ್ಶನದೊಂದಿಗೆ ಮಚ್ಚಾಮಾಡ ನಂದಿತಾ ಕಾರ್ಯಪ್ಪ ಅವರ ಗದ್ದೆಯಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಹಿಳೆಯರು ಮಿಂದೆದ್ದರು. ಹಗ್ಗಜಗ್ಗಾಟ, ಕೆಸರು ಗದ್ದೆ ಓಟ, ಚೆಂಡು ಆಟ ಗಮನ ಸೆಳೆಯಿತು. ವಾಲಗಕ್ಕೆ ಕುಣಿದು ಕುಪ್ಪಳಿಸಿದರು.

ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪೆಮ್ಮಂಡ ಸಬಿತ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮನೆಯಪಂಡ ನಿಮ್ಮಿ ನಟರಾಜ್ ಮತ್ತು ಬಾಚಿರ ಶೈಲಾ ಜೀವನ್ ಉಪಸ್ಥಿತರಿದ್ದರು. ಕಾಳಿಮಾಡ ಸೀಮಾ ಪ್ರಶಾಂತ್ ಅವರು ಕಕ್ಕಡ ನಮ್ಮೆ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಸಂದರ್ಭ ಕೂಟದ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.