ಐಗೂರು, ಆ. ೧೦: ಸೋಮವಾರಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಮಾದಾಪುರದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

ಮುಖ್ಯಬೀದಿಯಲ್ಲಿ ರಾಷ್ಟçಧ್ವಜ, ಭಗವಾಧ್ವಜ ಹಾಗೂ ಪಂಜು ಹಿಡಿದು ಮೆರವಣಿಗೆ ಸಾಗಲಾಯಿತು. ಅಖಂಡ ಭಾರತಕ್ಕಾಗಿ ಘೋಷಗಳು ಮೊಳಗಿದವು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಷ್ಟಿçÃಯ ಸ್ವಯಂಸೇವಕ ಸಂಘದ ಪ್ರಮುಖ ಉಡೋತ್ ಚಂದ್ರ ದಿಕ್ಸೂಚಿ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿ, ದುಷ್ಟಶಕ್ತಿಗಳು ವ್ಯವಸ್ಥಿತವಾಗಿ ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿವೆ. ಆದರೆ, ಭಾರತ ಮಾತ್ರ ಅಭಿವೃದ್ಧಿ ಶೀಲ ರಾಷ್ಟçವಾಗಿ ಮುನ್ನುಗುತ್ತಿದೆ. ‘ನಡೆ ಮುಂದೆ ನಡೆ ಮುಂದೆ, ನುಗ್ಗಿ ನಡೆ ಮುಂದೆ’ ಎಂಬ ಕವಿ ಕುವೆಂಪು ಅವರ ನುಡಿಯಂತೆ ಹರಿದು ಹಂಚಿ ಹೋಗಿರುವ ಭಾರತವನ್ನು ಅಖಂಡಗೊಳಿಸಲು ಪಣ ತೊಡಬೇಕು, ಮುಂದೊAದು ದಿನ ಭಾರತ ಅಖಂಡವಾಗುವುದರಲ್ಲಿ ಸಂಶಯವಿಲ್ಲ ಎಂದರು. ಇಗೋಡ್ಲು ಚಾಮುಂಡೇಶ್ವರಿ ದೇವಾಲಯದಿಂದ ಪಂಜಿನ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪುರುಷರು, ಮಹಿಳೆಯರು ಮತ್ತು ಮಕ್ಕಳ ಸಹಿತ ಹೊರಟ ಪಂಜಿನ ಮೆರವಣಿಗೆಯಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಮೆರವಣಿಗೆ ಉದ್ದಕ್ಕೂ ಮಹಿಳೆಯರು, ಪುರುಷರು ಮತ್ತು ಮಕ್ಕಳು ಜೈಕಾರ, ಘೋಷಣೆಗಳನ್ನು ಮೊಳಗಿಸುತ್ತಾ ಹೆಜ್ಜೆಹಾಕಿ ಹೊರಟ ಮೆರವಣಿಗೆಯು ಮಾದಾಪುರದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಮರಳಿ ಮಾದಾಪುರದ ಗಣಪತಿ ದೇವಾಲಯದಲ್ಲಿ ಮುಕ್ತಾಯಗೊಂಡಿತು.

ಸಭೆಯ ಅಧ್ಯಕ್ಷತೆಯನ್ನು ಮೂವತ್ತೊಕ್ಲುವಿನ ಮಾಜಿ ಸೈನಿಕ ಎಸ್. ಚೀಕಂಡ ಗಣಪತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಯೋಜಕ ಸುನಿಲ್ ಮಾದಾಪುರ, ತಾಲೂಕು ಸಂಯೋಜಕ ಉಮೇಶ್, ಸೋಮವಾರಪೇಟೆ ತಾಲೂಕು ಸಹ ಸಂಯೋಜಕ ಸೂರಜ್, ಮಾದಾಪುರ, ಹಿಂದೂ ಸುರಕ್ಷಾ ಸಮಿತಿಯ ಸಂಯೋಜಕ ಜಯರಾಮ್, ಪ್ರಮುಖರಾದ ಅಜಿತ್ ಕುಕ್ಕೇರ, ಬೋಜೇಗೌಡ, ಕುಮಾರ್ ಮೇಕೇರಿ, ಅಪ್ಪು ರೈ, ಡಾಲಿ, ಭುವನ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಡಿವೈಎಸ್‌ಪಿ ಚಂದ್ರಶೇಖರ್, ಪೊಲೀಸ್ ನಿರೀಕ್ಷಕ ಮುದ್ದು ಮಹಾದೇವ ಮತ್ತು ಎಎಸ್‌ಐ ಉಮೇಶ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.