ಮಡಿಕೇರಿ, ಆ. ೮: ಕುಶಾಲನಗರ ವಿದ್ಯುತ್ ಉಪಕೇಂದ್ರದಿAದ ಹೊರಹೊಮ್ಮುವ ಸುಂಟಿಕೊಪ್ಪ, ಪನ್ಯ, ಹೊಸಕೋಟೆ, ನಾಕೂರು, ಗದ್ದೆಹಳ್ಳ ಫೀಡರ್‌ಗಳಲ್ಲಿ ತಾ. ೧೧ ರಂದು ಬೆಳಿಗ್ಗೆ ೧೦.೦೦ ರಿಂದ ಸಂಜೆ ೫.೦೦ಗಂಟೆಯವರೆಗೆ ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಸುಂಟಿಕೊಪ್ಪ ಟೌನ್, ಪನ್ಯ ಹರದೂರು, ಉಲುಗುಲಿ, ನಾರ್ಗಾಣೆ, ಬೆಟ್ಟಗೇರಿ, ನಾಕೂರು, ಹೆರೂರು, ಅಂದಗೋವೆ, ಕೊಡಗರಹಳ್ಳಿ, ಹೊಸಕೋಟೆ, ಕಂಬಿಬಾಣೆ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.