ಸಿದ್ದಾಪುರ, ಆ. ೮ : ಕಾಡಾನೆ ದಾಳಿಗೆ ಸಿಲುಕಿ ಯುವಕನೋರ್ವ ಗಂಭೀರ ಗಾಯವಾಗಿದ್ದು ಪ್ರಾಣಪಾಯ ದಿಂದ ಪಾರಾಗಿರುವ ಘಟನೆ ಮಾಲ್ದಾರೆ ಸಮೀಪದ ಘಟ್ಟದಳ್ಳÀ ಬಳಿಯ ಅರಣ್ಯ ಇಲಾಖೆಯ ವಸತಿ ಗ್ರಹದ ಬಳಿ ಶುಕ್ರವಾರದಂದು ಬೆ¼ಗ್ಗಿನ ಜಾವ ನಡೆದಿದೆ. ಮಾಲ್ದಾರೆ ಗ್ರಾಮದ ಹಂಚಿತಿಟ್ಟು ನಿವಾಸಿಯಾಗಿರುವ ದಿಲೀಪ್ (೨೫) ಎಂಬವರು ಬೆಳಿಗ್ಗೆ ೮.೩೦ರ ಸಮಯಕ್ಕೆ ಮನೆಯಿಂದ ಸಿದ್ದಾಪುರಕ್ಕೆ ಪೂಜೆಗೆ ಹೂ ತರಲೆಂದು ತನಗೆ ಸೇರಿದ ಸ್ಕೂಟಿಯಲ್ಲಿ ಸಿದ್ದಾಪುರದತ್ತ ತೆರಳುತ್ತಿರುವ ಸಂದರ್ಭದಲ್ಲಿ ಘಟ್ಟದಳ್ಳ ತಿರುವಿನ ಸಮೀಪ ಅರಣ್ಯ ಇಲಾಖೆಯ ವಸತಿ ಗೃಹದ ಬಳಿ ಏಕಾಏಕಿ ಒಂಟಿ ಸಲಗ ಒಂದು ಹಠಾತ್ತನೆ ಬಂದಿದ್ದು ಸ್ಕೂಟಿ ಚಾಲಕ ದಿಲೀಪ್ ಮೇಲೆ ದಾಳಿ ನಡೆಸಲು ಯತ್ನಿಸಿದೆ. ಈ ಸಂದರ್ಭದಲ್ಲಿ ಭಯದಿಂದ ಕಾಡಾನೆಯ ದಾಳಿಯನ್ನು ತಪ್ಪಿಸಲು ಸ್ಕೂಟಿಯನ್ನು ಬಿಟ್ಟುಓಡುವ ಸಂದರ್ಭ ಆಯತಪ್ಪಿ ಬಿದ್ದು ದಿಲೀಪ್ ಅವರ ಕಾಲಿಗೆ ಹಾಗೂ ಕೈಗೆ ಗಂಭೀರ ಗಾಯವಾಗಿದ್ದು ಅದೃಷ್ಟವಶಾತ್ ಕೂದಲೆಳೆಯ ಅಂತರದಿAದ ಪ್ರಾಣಪಾಯದಿಂದ ಪಾರಾಗಿದ್ದಾರೆ. ನಂತರ ಸ್ಥಳೀಯರ ನೆರವಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಿದರು. ಸ್ಕೂಟಿಯನ್ನು ಬಿಟ್ಟು ಓಡುವ ಸಂದರ್ಭದಲ್ಲಿ ಕೋಪಗೊಂಡ ಸಲಗವು ಸ್ಕೂಟಿಯ ಮೇಲೆ ದಾಳಿ ನಡೆಸಿ ಜಖಂಗೊಳಿಸಿರುತ್ತದೆ. ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿಗಳಾದ ಹಂಸ ಮತ್ತು ಶಶಿ ಪಿ.ಟಿ. ಹಾಗೂ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

(ಮೊದಲ ಪುಟದಿಂದ)

ಸAಕೇತ್ ಪೂವಯ್ಯ ಭೇಟಿ

ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿರುವ ಕಾರ್ಮಿಕ ದಿಲೀಪ್ ಅವರನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಾಜ್ಯ ವನ್ಯಜೀವಿ ಸಮಿತಿ ಸದಸ್ಯ ಸಂಕೇತ್ ಪೂವಯ್ಯ ಅವರು ಯೋಗ ಕ್ಷೇಮ ವಿಚಾರಿಸಿದರು. ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಘಟ್ಟದಳ್ಳ ಸುತ್ತಮುತ್ತಲಿನಲ್ಲಿ ಕಳೆದ ಕೆಲವು ದಿನಗಳಿಂದ ಸಲಗ ಒಂದು ಸಂಚರಿಸುತ್ತಿದ್ದ ಕಾಡಾನೆಯೊಂದು ಕಾರ್ಮಿಕ ದಿಲೀಪ್ ಮೇಲೆ ಒಂಟಿ ಸಲಗ ದಾಳಿ ಮಾಡಿದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಸಲಗವನ್ನು ಕಾಡಿಗೆ ಆಟ್ಟುವ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು. ಕಳೆದ ಕೆಲವು ದಿನಗಳಿಂದ ಈ ಭಾಗದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳ ಹಿಂಡನ್ನು ಕಾಡಿಗೆ ಓಡಿಸಿದರು ಕೂಡ ಕೆಲವು ಕಾಡಾನೆಗಳು ಮರಳಿ ಕಾಫಿ ತೋಟದತ್ತ ಲಗ್ಗೆ ಇಟ್ಟು ತೊಂದರೆ ಮಾಡುತ್ತಿವೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಈಗಾಗಲೇ ಶಾಶ್ವತ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಶಾಸಕ ಪೊನ್ನಣ್ಣ ಅವರು ಸ್ಟಾಪ್ ರಿಲೀಸ್ ಯೋಜನೆಯನ್ನು ಜಾರಿಗೆ ತರಲು ಶ್ರಮಿಸುತ್ತಿದ್ದಾರೆ ಎಂದು ವಿವರಿಸಿದರು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಸ್ಟಾಪ್ ರಿಲೀಸ್ ಯೋಜನೆಯಿಂದ ಅನುಕೂಲವಾಗುತ್ತದೆ ಎಂದರು. ಕಾಡಾನೆಗಳನ್ನು ಪುನರ್ವಸತಿ ಸ್ಥಳಕ್ಕೆ ಸ್ಥಳಾಂತರಿಸಲು ಶಾಸಕ ಪೊನ್ನಣ್ಣ ಶ್ರಮಿಸುತ್ತಿದ್ದಾರೆ ಎಂದರು. ಈ ಭಾಗದ ಕಾರ್ಮಿಕರು ಹಾಗೂ ಗ್ರಾಮಸ್ಥರು ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಮನೆಯಿಂದ ಹೊರಬರುವ ಸಂದರ್ಭ ಎಚ್ಚರಿಕೆಯಿಂದ ಜಾಗೃತರಾಗಿ ಬರಬೇಕೆಂದು ಹಾಗೂ ಕಾಡಾನೆಗಳ ಬಗ್ಗೆ ಎಚ್ಚರ ವಹಿಸಬೇಕೆಂದು ಸಂಕೇತ್ ಮನವಿ ಮಾಡಿದರು.

ವರದಿ : ವಾಸು