ಮಡಿಕೇರಿ, ಆ. ೮: ಶ್ರೀಗಂಧ ಮರವನ್ನು ಕಡಿದು ಕಳ್ಳತನ ಮಾಡಿರುವ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ಸಮೀಪದ ಫೇರ್‌ಲ್ಯಾಂಡ್ ಎಸ್ಟೇಟ್‌ನಲ್ಲಿ ರೂ. ೫೦ ಸಾವಿರ ಮೌಲ್ಯದ ಶ್ರೀಗಂಧದ ಮರವನ್ನು ಕಡಿದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಇದರ ಕುರಿತು ಕ್ರಮಕೈಗೊಳ್ಳುವಂತೆ ಎಸ್ಟೇಟ್‌ನ ಫೀಲ್ಡ್ ಆಫೀಸರ್ ಸುಮಂತ್ ದೂರು ನೀಡಿದ್ದಾರೆ. ಇದರನ್ವಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.