ಚೆಟ್ಟಳ್ಳಿ, ಆ. ೭: ಪೊನ್ನತಮೊಟ್ಟೆ ಸರಕಾರಿ ಶಾಲೆಯ ಅಭಿವೃದ್ಧಿಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ರೂ. ೭ ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದಾರೆ.
ಏಪ್ರಿಲ್ ೨ ರಂದು ಶಕ್ತಿ ಪತ್ರಿಕೆಯಲ್ಲಿ ‘ಶಿಥಿಲಾವಸ್ಥೆಯಲ್ಲಿ ಪೊನ್ನತಮೊಟ್ಟೆ ಸರಕಾರಿ ಶಾಲೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡು ಸಂಬAಧಿಸಿದವರ ಗಮನ ಸೆಳೆದಿತ್ತು. ಇದೀಗ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಈ ಸಂಬAಧ ಕಾಮಗಾರಿ ಅತೀ ಶೀಘ್ರದಲ್ಲಿ ಆರಂಭಕ್ಕೆ ಶಾಸಕರ ಸೂಚನೆ ಮೇರೆಗೆ ಶಾಲೆಗೆ ಪಂಚಾಯತ್ ರಾಜ್ ಮುಖ್ಯ ಅಭಿಯಂತರ ನಾರಾಯಣ್ ಮೂರ್ತಿ ಭೆೆÃಟಿ ನೀಡಿ ಪರೀಶೀಲಿಸಿದರು.
ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷ ಟಿ.ಎಂ. ಮಹಮ್ಮದ್ ರಫಿ, ಸಹಾಯಕ ಅಭಿಯಂತರ ಸಲೀಂ, ಗ್ರಾಮ ಪಂಚಾಯಿತಿ ಸದಸ್ಯೆ ರಸೀನಾ , ಎಸ್‌ಡಿಎಂಸಿ ಅಧ್ಯಕ್ಷ ಶೌಕತ್, ಮಾಜಿ ಅಧ್ಯಕ್ಷ ಶಕೀನಾ, ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಗುತ್ತಿಗೆದಾರರು ಹಾಜರಿದ್ದರು.