ಮಡಿಕೇರಿ, ಆ. ೮: ಅಮೇರಿಕಾದ ಬೋಸ್ಟನ್‌ನಲ್ಲಿ ಮೂರು ದಿನಗಳ ಕಾಲ ನ್ಯಾಷನಲ್ ಕಾನ್ಫರೆನ್ಸ್ ಆಫ್ ಸ್ಟೇಟ್ ಲೆಜಿಸ್ಲೇರ‍್ಸ್ (ಓSಅಐ) ಮತ್ತು ರಾಷ್ಟಿçÃಯ ಲೆಜೆಸ್ಲೇರ‍್ಸ್ ಕಾನ್ಫರೆನ್ಸ್ ಭಾರತ್ ವತಿಯಿಂದ ಜರುಗಿದ ಶೃಂಗಸಭೆಯಲ್ಲಿ ಕೊಡಗಿನ ಎಂಎಲ್‌ಸಿ ಎಂ.ಪಿ. ಸುಜಾ ಕುಶಾಲಪ್ಪ ಅವರು ರಾಜ್ಯದ ಇನ್ನಿತರ ಆಹ್ವಾನಿತ ಜನಪ್ರತಿನಿಧಿಗಳೊಂದಿಗೆ ಪಾಲ್ಗೊಂಡಿದ್ದರು.

ಈ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳ ಶಾಸಕರುಗಳು ಭಾಗಿಯಾಗಿದ್ದರು. ರಾಜ್ಯಗಳ ಅಭಿವೃದ್ಧಿ, ಮೂಲಭೂತ ಸೌಕರ್ಯಗಳು, ನಿರ್ಮಾಣಗಳ ಕುರಿತು ಚರ್ಚೆ ನಡೆಯಿತು. ಕರ್ನಾಟಕ ರಾಜ್ಯದ ವಿಧಾನಸಭೆಯಿಂದ ೧೨ ಶಾಸಕರುಗಳು ಹಾಗೂ ವಿಧಾನ ಪರಿಷತ್‌ನಿಂದ ಸಭಾಪತಿ ಬಸವರಾಜ್ ಹೊರಟ್ಟಿ ಸೇರಿ ೧೦ ಮಂದಿ ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದು, ಇವರಲ್ಲಿ ಕೊಡಗಿನ ಎಂಎಲ್‌ಸಿ ಸುಜಾ ಕುಶಾಲಪ್ಪ ಅವರು ಒಬ್ಬರಾಗಿದ್ದರು.