ಚೆಯ್ಯಂಡಾಣೆ, ಆ. ೮: ಪ್ರಜಾಪ್ರಭುತ್ವ ರಾಷ್ಟçವಾದ ಭಾರತವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ ಎಂದು ಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ನಿಕಟಪೂರ್ವ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಕರೆ ನೀಡಿದರು.

(ಮೊದಲ ಪುಟದಿಂದ) ಎಸ್‌ಎಸ್‌ಎಫ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ಆಝಾದಿ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು. ಭಾರತಕ್ಕೆ ಸರಿಸಾಟಿಯಾದ ದೇಶ ಬೇರೊಂದಿಲ್ಲ. ಎಲ್ಲಾ ಧರ್ಮಗಳನ್ನೊಳಗಂಡ ರಾಷ್ಟçವಾಗಿರುವ ಭಾರತದಲ್ಲಿ ಏಕತೆಯೇ ದೊಡ್ಡ ಶಕ್ತಿಯಾಗಬೇಕು. ಭಾರತೀಯರು ಎಂಬ ಅಭಿಮಾನ ಮೈಗೂಡಿಸಿಕೊಳ್ಳಬೇಕು ಎಂದರು.

ನಮ್ಮೊಳಗಿನ ಭಾರತ ಜಾಗೃತಗೊಳ್ಳಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಎಲ್ಲಾ ಜಿಲ್ಲೆಗಳಲ್ಲೂ ವರ್ಷಂಪ್ರತಿ ಆಝಾದಿ ರ‍್ಯಾಲಿ ನಡೆಯುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರವೂ ಮುಖ್ಯವಾಗಿರುತ್ತದೆ. ಪರಸ್ಪರ ಗೌರವ ಮನೋಭಾವನೆ ಇರಬೇಕು. ಏಕತೆಯಿಂದ ಎಲ್ಲಾ ಧರ್ಮದವರು ಒಂದುಗೂಡಿ ದೇಶವನ್ನು ಕಟ್ಟುವಂತಾಗಬೇಕು ಎಂದರು.

ಅಝಾದಿ ರ‍್ಯಾಲಿ ಗೋಣಿಕೊಪ್ಪ ಎಪಿಎಂಸಿಯಿAದ ಪ್ರಾರಂಭಗೊAಡು ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಖಾಸಗಿ ಬಸ್ ನಿಲ್ದಾಣದಲ್ಲಿ ಮುಕ್ತಾಯಗೊಂಡಿತು.

ರಸ್ತೆಯುದ್ಧಕ್ಕೂ ಶಾಂತಿ, ಸೌಹಾರ್ದತೆಯ ಜಾಥಾ ಸ್ವಾತಂತ್ರö್ಯ ಹೋರಾಟಗಾರ ತ್ಯಾಗ, ಬಲಿದಾನವನ್ನು ಸ್ಮರಿಸುವ ಜೈಕಾರ ಮೊಳಗಿತು.

ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಪ್ರಾರ್ಥಿಸಿ ಜಾಥಾಕ್ಕೆ ಚಾಲನೆ ನೀಡಿದರು. ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಕಮರುದ್ದಿನ್ ಅನ್ವಾರಿ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಇಲ್ಯಾಸ್ ಅಲ್ ಐದರೂಸಿ ತಂಙಳ್, ಸಯ್ಯದ್ ಮೆಹ್ದಿ ಅಹ್ಮದ್ ತಂಙಳ್ ಲಕ್ಷದೀಪ್, ರಾಜ್ಯ ಸಮಿತಿಯ ಅಹ್ಮದ್ ಮದನಿ, ವಕೀಲ ಝಮೀರ್, ಬಾಪು ಬೊಮ್ಮತಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಕಾರ್ಯದರ್ಶಿ ಸಯ್ಯದ್ ಬಾವ, ಅಲಿರಾ ರಶೀದ್, ಮುಖಂಡರಾದ ಎರ್ಮು ಹಾಜಿ, ಮೊಯ್ದೀನ್ ಬಾಳುಗೋಡು, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ, ಕಾಂಗ್ರೆಸ್ ಮಡಿಕೇರಿ ಬ್ಲಾಕ್ ಅಧ್ಯಕ್ಷ ಹಂಸ ಕೊಟ್ಟಮುಡಿ, ಎಸ್‌ವೈಎಸ್ ಜಿಲ್ಲಾಧ್ಯಕ್ಷÀ ಮುನೀರ್ ಮಲ್ಳರಿ, ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಜಿಲ್ಲಾ ವಕ್ಪ್ ಬೋರ್ಡ್ ಅಧ್ಯಕ್ಷ ಹಕೀಂ ಸೇರಿದಂತೆ ಇನ್ನಿತರರು ಹಾಜರಿದ್ದರು.