ಮಡಿಕೇರಿ, ಆ. ೮ : ಗೋಣಿಕೊಪ್ಪದ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ತಾ. ೯ರಂದು (ಇಂದು) ಅತ್ತೂರಿನ ಪಾಮ್ ವ್ಯಾಲಿ ರೆಸಾರ್ಟ್ನಲ್ಲಿ ಕಕ್ಕಡ ಸಂಭ್ರಮಾಚರಣೆ ನಡೆಯಲಿದೆ. ಈ ಪ್ರಯುಕ್ತ ಕಕ್ಕಡ ಸಂದರ್ಭದ ಮದ್ದು ಪಾಯಸ ಸೇರಿದಂತೆ ವಿವಿಧ ಖಾದ್ಯಗಳ ಪ್ರದರ್ಶನ - ಸ್ಪರ್ಧೆ ಹಾಗೂ ಮಹಿಳೆಯರಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಳಿಗ್ಗೆ ೯.೩೦ ರಿಂದ ಕಾರ್ಯಕ್ರಮ ಆರಂಭಗೊಳ್ಳಲಿರುವುದಾಗಿ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಹಾಗೂ ಕಾರ್ಯದರ್ಶಿ ಮುಕ್ಕಾಟಿರ ಟೀನಾ ಪ್ರಸನ್ನ ತಿಳಿಸಿದ್ದಾರೆ.