ಮಡಿಕೇರಿ, ಆ. ೭ : ಮಡಿಕೇರಿ-ವೀರಾಜಪೇಟೆ ಸಂಪರ್ಕ ರಸ್ತೆಯ ಮೇಕೇರಿ ಬಳಿ ಅಲ್ಪ ಪ್ರಮಾಣದ ಭೂ ಕುಸಿv ಸಂಭವಿಸಿದೆ. ಮಳೆಯಿಂದ ಚರಂಡಿ ನೀರು ಕಾಂಕ್ರೀಟ್ ರಸ್ತೆಯ ಮೇಲೆ ಹರಿದು ಇಳಿಜಾರು ಪ್ರದೇಶದಲ್ಲಿರುವ ಕಾಫಿ ತೋಟಕ್ಕೆ ಮಳೆ ನೀರು ನುಗ್ಗಿದೆ. ಪರಿಣಾಮ ಕಡಿದಾದ ಕಾಫಿ ತೋಟದಲ್ಲಿ ರಸ್ತೆಗೆ ಹೊಂದಿಕೊAಡAತೆ ಅಲ್ಪ ಪ್ರಮಾಣದ ಭೂ ಕುಸಿದಿದ್ದು, ಕಾಂಕ್ರೀಟ್ ರಸ್ತೆ ನಿರ್ಮಿಸುವ ಸಂದರ್ಭ ಅಳವಡಿಸಿದ್ದ ಎಂ ಸ್ಯಾಂಡ್ ಚೀಲಗಳು ಕೊಚ್ಚಿ ಹೋಗಿವೆ. ಮುಂದಿನ ದಿನಗಳಲ್ಲಿ ಮತ್ತೆ ಮಳೆಯಾದಲ್ಲಿ ಮಡಿಕೇರಿ-ವೀರಾಜಪೇಟೆ ಸಂಪರ್ಕ ರಸ್ತೆಗೆ ಸಂಚಕಾರ ಎದುರಾಗುವ ಸಾಧ್ಯತೆಗಳು ಕಂಡು ಬಂದಿವೆ. ಮಾಹಿತಿ ಅರಿತ ಬಳಿಕ ಲೋಕೋಪಯೋಗಿ ಇಲಾಖೆ, ಮಡಿಕೇರಿ ಸಂಚಾರಿ ಪೊಲೀಸರು ಘಟನಾ ಸ್ಥಳದಲ್ಲಿ ಎಚ್ಚರಿಕೆಯ ರಿಬ್ಬನ್‌ಗಳನ್ನು ಅಳವಡಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಿದ್ದಾರೆ.