ಕೂಡಿಗೆ, ಜು. ೨೩: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಾಗಾರ ಬಾಳೆಗುಂಡಿ ಹಾಡಿಯಲ್ಲಿ ಮಾಹಿತಿ ನಡೆಯಿತು. ಸೋಮವಾರಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ಹಾಡಿಗಳಲ್ಲಿ ಶಿಶು ಮರಣಕ್ಕೆ ಕಾರಣಗಳು, ಸಿಕಲ್ ಸೆಲ್, ರಕ್ತ ಹೀನತೆ ತಪಾಸಣೆ, ಉಚಿತ ಚಿಕಿತ್ಸೆ, ಗೃಹ ಆರೋಗ್ಯ ಕಾರ್ಯಕ್ರಮ ಸೇರಿದಂತೆ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಮೇಲ್ವಿಚಾರಕಿ ಸಾವಿತ್ರವ್ವ, ಮಾತೃವಂದನ ಮತ್ತು ಭಾಗ್ಯಲಕ್ಷಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಸಹಾಯವಾಣಿ, ಮಕ್ಕಳ ಸುರಕ್ಷತೆಯ ಕುರಿತು ಮಧು ಮತ್ತು ದಮಯಂತಿ ತಿಳಿಸಿದರು. ಈ ವೇಳೆ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭ ಅಭಿವೃದ್ಧಿ ಅಧಿಕಾರಿ ಮೇದಪ್ಪ, ಆರೋಗ್ಯ ಕೇಂದ್ರದ ನೀಲಮ್ಮ, ಪುನೀತ್, ಮಂಜುನಾಥ, ಪ್ರೇಮ, ರೇಷ್ಮಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.