ಮಡಿಕೇರಿ, ಜು. ೨೩: ಕೊಡಗು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್‌ನ ೨೫ನೇ ವರ್ಷದ ಆಚರಣೆ ಮೈಸೂರಿನಲ್ಲಿ ನಡೆಯಿತು.

ಅಲ್ಲಿನ ಖಾಸಗಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗಿನ ೪೦ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು. ಇಂದಿನ ಹಾಳಾಗುತ್ತಿರುವ ಜೀವನಶೈಲಿಯಿಂದ ಮನುಷ್ಯನಿಗೆ ಕಾಡುತ್ತಿರುವ ಹೊಟ್ಟೆ ಹಾಗೂ ಯಕೃತ್‌ನ ಸಮಸ್ಯೆಗಳ ಬಗ್ಗೆ ದೀರ್ಘವಾಗಿ ಚರ್ಚಿಸಲಾಯಿತು.

ಅತ್ಯಂತ ಸುಲಭವಾಗಿ ಕಾಯಿಲೆಗಳನ್ನು ತಡೆಗಟ್ಟುವ ಹಾಗೂ ಕಾಯಿಲೆ ವಿಪರೀತವಾದಾಗ ಅದಕ್ಕೆ ನೀಡಬೇಕಾದಂತಹ ಪೋಷಣೆಯ ವಿಚಾರವಾಗಿ ವೈದ್ಯರಿಗೆ ಹೆಚ್ಚಿನ ಅರಿವು ಮೂಡಿಸಲಾಯಿತು.

ಭಾಗವಹಿಸಿದ ವೈದ್ಯರು ಬಂದAತಹ ವಿಶೇಷ ತಜ್ಞರೊಂದಿಗೆ ಸಮಾಲೋಚನೆಯನ್ನು ನಡೆಸಿದರು. ಇದೇ ಸಂದರ್ಭ ಕೊಡಗಿನ ವೈದ್ಯರಲ್ಲಿ ಲಕ್ಕಿ ಡಾಕ್ಟರ್ - ಲಕ್ಕಿ ಕ್ಲಿನಿಕ್ ಎಂಬ ಸ್ಪರ್ಧೆ ನಡೆಸಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು.

ಕೊಡಗಿನ ವೈದ್ಯರುಗಳಾದ ಡಾ. ಶ್ಯಾಮ್ ಪ್ರಸಾದ್ ಪಿ.ಎಸ್. ಹಾಗೂ ಡಾಕ್ಟರ್ ಉದಯಶಂಕರ್ ಎಸ್. ಅವರು ರಾಷ್ಟçಮಟ್ಟದಲ್ಲಿ ಮಾಡಿದ ಸಾಧನೆಗೆ ಅವರುಗಳನ್ನು ಗೌರವಿಸಲಾಯಿತು.

ಎನ್.ಐ.ಎಂ.ಎ. ಕೊಡಗು ಇದರ "ಸುಳ್ಯ ಚಾಪ್ಟರ್" ಪ್ರಾರಂಭವಾಗುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಯಿತು. ಎನ್.ಐ.ಎಂ.ಎ. ಕೊಡಗು ಅಧ್ಯಕ್ಷ ಡಾ. ರಾಜಾರಾಮ್, ಖಜಾಂಚಿ ಡಾ. ಪದ್ಮನಾಭ, ಮಹಿಳಾ ಘಟಕದ ಅಧ್ಯಕ್ಷೆ ಡಾ. ಶೈಲಜಾ ರಾಜೇಂದ್ರ, ಕೊಡಗು ಡಿಎಓ ಡಾ. ಶೈಲಜಾ ಮುರಳೀಧರ್, ಹಿರಿಯ ವೈದ್ಯರುಗಳಾದ ಡಾ. ರಾಜೇಂದ್ರ, ಡಾ. ಮಹೇಶ್, ಡಾ. ಪುರುಷೋತ್ತಮ್ ಹಾಗೂ ಕೊಡಗಿನ ವಿವಿಧ ತಾಲೂಕುಗಳಿಂದ ಆಗಮಿಸಿದ ವೈದ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಡಾ. ಜ್ಯೋತಿ ರಾಜಾರಾಮ್ ಅವರು ಪ್ರಾರ್ಥನೆಗೈದರು, ಡಾ. ಉದಯಶಂಕರ ಅವರು ಸ್ವಾಗತಿಸಿದರು, ಡಾ. ಹೀನ ಕೌಸರ್ ಅವರು ತಜ್ಞರ ಪರಿಚಯ ಹಾಗೂ ಡಾ. ಅಮೂಲ್ಯ ಅವರು ವಂದನಾರ್ಪಣೆ ಮಾಡಿದರು. ಡಾ. ಸೌಮ್ಯ ಗಣರಾಜ್ ಅವರು ನಿರೂಪಿಸಿದರು.