ಚೆಯ್ಯAಡಾಣೆ, ಜು. ೨೨: ವೀರಾಜಪೇಟೆ ಪಟ್ಟಣದ ಪಂಜರ್‌ಪೇಟೆ ಹಿಲ್ ಬ್ಲೂಮ್ಸ್ ಆಸ್ಪತ್ರೆ ಹಾಗೂ ಹೋಂಡಾ ಶೋರೂಂ ಸಮೀಪ ಕಾಲ್ನಡಿಗೆ ರಸ್ತೆಯ ಚರಂಡಿಯನ್ನು ಕಳೆದ ಕೆಲವು ತಿಂಗಳಿನಿAದ ದುರಸ್ತಿಪಡಿಸದೆ, ಚರಂಡಿಯ ಸ್ಲಾö್ಯಬ್ ತೆರೆದ ಸ್ಥಿತಿಯಲ್ಲಿತ್ತು. ಇದರಿಂದ ಹಲವಾರು ಪಾದಚಾರಿಗಳು, ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಚರಂಡಿಗೆ ಬಿದ್ದು ಗಾಯಗೊಂಡಿದ್ದ ಘಟನೆಗಳೂ ನಡೆದಿದ್ದವು. ಈ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರಿಗೆ ದೂರವಾಣಿ ಮುಖಾಂತರ ತಿಳಿಸಿದ ಹಿನ್ನೆಲೆಯಲ್ಲಿ ಕೂಡಲೇ ಸ್ಪಂದಿಸಿದ ಅವರು ಚರಂಡಿಯ ಮೇಲೆ ಸ್ಲಾö್ಯಬ್ ಮುಚ್ಚಿಸಿದ್ದಾರೆ. ಅದೇ ರೀತಿ ಮಾರ್ಕೆಟ್ ಸಮೀಪ ರಸ್ತೆ ಬದಿಯಲ್ಲಿದ್ದ ಉಪಯೋಗಕ್ಕೆ ಬಾರದ ಕಾಂಕ್ರೀಟ್ ಸ್ಲಾö್ಯಬ್ ಹಾಗೂ ತಾಜ್ಯಗಳಿಂದ ಪಾದಚಾರಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದ್ದುದನ್ನು ಮನಗಂಡು ಅದನ್ನು ಕೂಡ ತೆರವುಗೊಳಿಸಲು ಕ್ರಮಕೈಗೊಂಡರು.

- ಅಶ್ರಫ್