*ಗೋಣಿಕೊಪ್ಪ, ಜು. ೧೯ : ಕೊಡಗಿಗೆ ಪ್ರವಾಸಕ್ಕೆ ಬಂದ ಪ್ರವಾಸಿಗರ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಅಂಗಳಕ್ಕೆ ಉರುಳಿ ಬಿದ್ದ ಘಟನೆ ಶನಿವಾರ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ನಡೆದಿದೆ.

ಬೆಂಗಳೂರಿನಿAದ ಹುದಿಕೇರಿ ಮಾರ್ಗವಾಗಿ ಸಂಚರಿಸಿ ಇರ್ಪುಫಾಲ್ಸ್ ಸೌಂದರ್ಯವನ್ನು ಸವಿದು ಕೇರಳದ ವೈನಾಡಿಗೆ ಪ್ರವಾಸಯಾತ್ರೆ ರೂಪಿಸಿಕೊಂಡು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹುದಿಕೇರಿಯ ಗ್ರಾಮದ ಸೆವೆನ್ತ್ಮೈಲ್‌ನಲ್ಲಿ ಮಲ್ಲಂಡ ಯತೀಶ್ ಅವರ ಮನೆಯ ಅಂಗಳಕ್ಕೆ ಕಾರು ಮಗುಚಿಕೊಂಡಿದೆ.

ಕಾರಿನಲ್ಲಿ ಮೂರು ಯುವಕರು ಮತ್ತು ಮಹಿಳೆ ಸೇರಿ ನಾಲ್ಕು ಜನ ಪ್ರಯಾಣಿ ಸುತ್ತಿದ್ದರು. ಸಣ್ಣಪುಟ್ಟ ಗಾಯಗಳಿಂದ ಪ್ರವಾಸಿಗರು ಪಾರಾಗಿದ್ದಾರೆ. ಕಾರು ಮಗುಚಿ ಬಿದ್ದ ವೇಳೆ ಮಲ್ಲಂಡ ಯತೀಶ್ ಅವರ ಮನೆಯ ಗೋಡೆಗೆ ಅಪ್ಪಳಿಸಿದ್ದರಿಂದ ಗೋಡೆ ಬಿರುಕು ಬಿಟ್ಟಿದೆ. ಪ್ರವಾಸಿಗರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೇರೊಂದು ವಾಹನದಲ್ಲಿ ತಮ್ಮೂರಿನತ್ತ ತೆರಳಿದರು.

(ಮೊದಲ ಪುಟದಿಂದ) ಸ್ಥಳೀಯ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಹುದಿಕೇರಿ ಸೆವೆನ್ತ್ಮೈಲ್‌ನಲ್ಲಿ ಮಲ್ಲಂಡ ಯತೀಶ್ ಅವರ ಮನೆ ಇದ್ದು, ರಸ್ತೆ ತಿರುವು ಇರುವುದರಿಂದ ವಾಹನಗಳು ನಿಯಂತ್ರಣ ಕಳೆದುಕೊಂಡಾಗ ಮನೆಯಂಗಳಕ್ಕೆ ನುಗ್ಗುತ್ತವೆ. ಹೀಗಾಗಿ, ಈ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲು ಹಲವು ಬಾರಿ ಪಂಚಾಯಿತಿಗೆ ಮನವಿ ಮಾಡಿದರೂ ಸ್ಪಂದಿನ ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.