ಚೆಯ್ಯಂಡಾಣೆ, ಜು. ೧೮: ಕುಂಜಿಲ ಪೈನರಿ ಸುನ್ನಿ ಮುಸ್ಲಿಂ ಜಮಾ ಅತ್‌ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕುಂಜಿಲ ಪೈನರಿ ಮದರಸ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಎಂ.ಎ. ಸೌಕತ್ ಅಲಿ ನೇತೃತ್ವದ ಸಮಿತಿ ಪದಾಧಿಕಾರಿಗಳು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮನ್ ವಿ.ಎ., ಪ್ರಧಾನ ಕಾರ್ಯದರ್ಶಿಯಾಗಿ ಸಈದ್ ಪಿ.ಹೆಚ್., ಕೋಶಾಧಿಕಾರಿಯಾಗಿ ಹಂಸ ಕುಂಡAಡ, ದರ್ಸ್ ಸಮಿತಿಯ ಅಧ್ಯಕ್ಷರಾಗಿ ಹಂಸ ತರಮಲ್, ಕಾರ್ಯದರ್ಶಿಯಾಗಿ ಷಂಶುದ್ದೀನ್ ಪಿ.ಎ., ರಿಲೀಫ್ ಸಮಿತಿಯ ಅಧ್ಯಕ್ಷರಾಗಿ ಬಷೀರ್ ಪಿ.ಎ., ಕಾರ್ಯದರ್ಶಿಯಾಗಿ ಹಾರಿಸ್ ಝೈನಿ, ನೂತನ ಮಸೀದಿಯ ಸಮಿತಿಯ ಕಾರ್ಯದರ್ಶಿಯಾಗಿ ಮೊಯಿದ್ದೀನ್ ಕುಂಞÂ, ಸಹ ಕಾರ್ಯದರ್ಶಿಯಾಗಿ ಸಮೀರ್ ಎಂ.ಹೆಚ್. ಆಯ್ಕೆಯಾಗಿದ್ದಾರೆ.