ಮಡಿಕೇರಿ, ಜು. ೧೧: ಪ್ರಸಕ್ತ ಸಾಲಿನ ಕ್ರಿಯಾಯೋಜನೆಯಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿ ‘ಹಾಡಿರೇ ರಾಗಗಳ-ತೂಗಿರೇ ದೀಪಗಳ’ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಜನಪದ, ಭಾವಗೀತೆ, ಸುಗಮ ಸಂಗೀತ, ರಂಗಗೀತೆಗಳು, ಲಾವಣಿ ಪದಗಳು, ಡೊಳ್ಳಿನ ಪದಗಳು ಇತ್ಯಾದಿ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಒಂದು ದಿನದ ಕಾರ್ಯಕ್ರಮ ಏರ್ಪಡಿಸಲಾಗುವುದು. ಕೊಡಗು ಜಿಲ್ಲೆಯಲ್ಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ಜನಪದ, ಭಾವಗೀತೆ, ಸುಗಮ ಸಂಗೀತ, ರಂಗಗೀತೆಗಳು, ಲಾವಣಿ ಪದಗಳು, ಡೊಳ್ಳಿನ ಪದಗಳು ಮತ್ತಿತರ ಕಲಾವಿದರು ತಮ್ಮ ಪೂರ್ಣ ವಿಳಾಸದೊಂದಿಗೆ ಸಹಾಯಕ £ರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ಇಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗೆ ದೂ. ೦೮೨೭೨-೨೨೮೪೯೦ ನ್ನು ಕಚೇರಿ ವೇಳೆಯಲ್ಲಿ ಸಂರ್ಪಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ತಿಳಿಸಿದ್ದಾರೆ.