ಕೂಡಿಗೆ, ಜು. ೧೧: ಕುಶಾಲನಗರ ವಿಶ್ವಕರ್ಮ ಸಮಾಜದ ವತಿಯಿಂದ ಕೊಡಗು ಜಿಲ್ಲೆಯಿಂದ ರಾಜ್ಯ ವಿಶ್ವಕರ್ಮ ಸಮಾಜದ ನಿರ್ದೇಶಕರಾಗಿ, ರಾಜ್ಯ ವಿಶ್ವಕರ್ಮ ಸಮಾಜದ ಕಾನೂನು ಸಲಹೆಗಾರರಾಗಿ ನೇಮಕಗೊಂಡ ಕೆ.ಎಸ್. ಚಂದ್ರಶೇಖರ್ ದಂಪತಿ ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್.ಬಿ. ಲಿಂಗಮೂರ್ತಿ, ಉಪಾಧ್ಯಕ್ಷ ಸಿ. ದುರ್ಗೇಶ್, ಕಾರ್ಯದರ್ಶಿ ಹೆಚ್.ಬಿ. ರಾಜಮೂರ್ತಿ, ಗೌರವಾಧ್ಯಕ್ಷ ವಿ. ಕುಮಾರ್, ಮಾಜಿ ಕಾರ್ಯದರ್ಶಿ ಹೆಚ್.ಎನ್. ನಾಗಾಚಾರಿ, ಮಾಜಿ ಕಾರ್ಯದರ್ಶಿ ಕೆ.ಬಿ. ಮೋಹನ್, ಸದಸ್ಯರಾದ ದಿನೇಶ್ ಕುಮಾರ್, ಹೆಚ್.ಎಸ್. ಸೋಮಶೇಖರ ಹೆಚ್.ಎಸ್. ನಾಗಣ್ಣಚಾರ್, ಕೂಡ್ಲೂರು ಕುಮಾರ್, ದಕ್ಷಿಣ ಮೂರ್ತಿ, ಹೆಚ್.ಜಿ. ಸೋಮಶೇಖರ್, ಹೆಚ್.ಎನ್. ಸದಾನಂದ, ಪುಟ್ಟರಾಜು, ಎಸ್. ದಿನೇಶ್ ಆಚಾರಿ ಇದ್ದರು.