ಸೋಮವಾರಪೇಟೆ, ಜು. ೧೧: ಕಾರವಾರ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಸಂಶೋಧನಾ ವಿದ್ಯಾರ್ಥಿನಿ, ಪಟ್ಟಣ ಸಮೀಪದ ಚೌಡ್ಲು ನಿವಾಸಿ ಅರ್ಪಿತಾ ಜಿ.ಎ. ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಅರ್ಪಿತಾ ಜಿ.ಎ. ಅವರು ಸಾಧರಪಡಿಸಿದ ಮಹಾಪ್ರಬಂಧವನ್ನು ಇಲೆಕ್ಟಿçಕಲ್ ಮತ್ತು ಇಲೆಕ್ಟಾçನಿಕ್ಸ್ ಇಂಜಿನಿಯರಿAಗ್ ಸೈನ್ಸಸ್ ವಿಭಾಗದಲ್ಲಿ ಅಂಗೀಕರಿಸಿ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ. ಇವರು ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಕಾರವಾರದ ಇ ಅಂಡ್ ಸಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ಡಾ. ಎ.ಎಲ್. ಚೂಡಾರತ್ನಾಕರ ಅವರ ಮಾರ್ಗದರ್ಶನದಲ್ಲಿ "ಐಚಿಟಿಜsಟiಜe Susಛಿeಠಿಣibiಟiಣಥಿ ಒಚಿಠಿಠಿiಟಿg ಜಿoಡಿ ಏoಜಚಿgu ಖegioಟಿ usiಟಿg ಒಚಿಛಿhiಟಿe ಐeಚಿಡಿಟಿiಟಿg ಖಿeಛಿhಟಿiques" ಎಂಬ ವಿಷಯಕ್ಕೆ ಸಂಬAಧಿಸಿದAತೆ ಸಂಶೋಧನೆಯನ್ನು ಕೈಗೊಂಡು ಮಹಾಪ್ರಬಂಧವನ್ನು ವಿಟಿಯುಗೆ ಸಾಧರಪಡಿಸಿದ್ದಾರೆ.

ಅರ್ಪಿತಾ ಜಿ.ಎ. ಅವರು ಪ್ರಸ್ತುತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಂತ್ರಜ್ಞಾನ ಸಂಸ್ಥೆಯಲ್ಲಿ ಎಲೆಕ್ಟಾçನಿಕ್ಸ್ ಆಂಡ್ ಕಮ್ಯೂನಿಕೇಷನ್ ಇಂಜಿನಿಯರಿAಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಭಾರತೀಯ ವಾಯುಪಡೆಯಲ್ಲಿ ಸೇವೆ ನಿರ್ವಹಿಸುತ್ತಿರುವ ಯಶವಂತ್ ಪಿ.ಜಿ. ಅವರ ಪತ್ನಿಯಾಗಿದ್ದು, ಪ್ರಸ್ತುತ ಚೌಡ್ಲು ಗ್ರಾಮದಲ್ಲಿ ನೆಲೆಸಿರುವ ಬಿ.ಎಸ್.ಎನ್.ಎಲ್. ನಿವೃತ್ತ ಉದ್ಯೋಗಿ ಅಚ್ಚಯ್ಯ ಹಾಗೂ ನಿವೃತ್ತ ಶಿಕ್ಷಕಿ ವೇದಾವತಿ ಅವರ ಪುತ್ರಿ.