ಮಡಿಕೇರಿ, ಜು. ೧೧: ಬೆಂಗಳೂರಿನ ವಕ್ಫ್ ಬೋರ್ಡ್ ಕಚೇರಿಯಲ್ಲಿ ಮಡಿಕೇರಿ ಶಾಸಕÀ ಡಾ. ಮಂತರ್ ಗೌಡ ಅವರ ನೇತೃತ್ವದಲ್ಲಿ, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ ಹಾಗೂ ಹೊದವಾಡ ಹೈದ್ರೂಸ್ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್, ವಕ್ಫ್ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಿ, ಮಡಿಕೇರಿ ತಾಲೂಕಿನ ಹೊದವಾಡದ ಹೈದ್ರೂಸ್ ಜುಮಾ ಮಸೀದಿ ಹಾಗೂ ಮದರಸ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದರು. ತಕ್ಷಣ ಸ್ಪಂದಿಸಿದ ಸಚಿವ ಜಮೀರ್ ಅಹ್ಮದ್ ಅನುದಾನ ಬಿಡುಗಡೆಗೊಳಿಸಿದರು.