ಮುಳ್ಳೂರು, ಜು. ೧೦: ಯೂತ್ ಫಾರ್ ಸೇವಾ ಸಂಸ್ಥೆ ವತಿಯಿಂದ ಶನಿವಾರಸಂತೆ ಪಟ್ಟಣದ ತ್ಯಾಗರಾಜ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿAದ ೭ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪುಸ್ತಕ, ಪೆನ್ನು, ಪೆನ್ಸಿಲ್, ಪೌಚ್ ಇನ್ನೂ ಮುಂತಾದ ಲೇಖನಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಸಂಸ್ಥೆಯ ಪ್ರತಿನಿಧಿ ಹಾರೆಹೊಸೂರು ಮೊಯ್ದು ವಿದ್ಯಾರ್ಥಿಗಳಿಗೆ ಸಾಮಗ್ರಿಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಶನಿವಾರಸಂತೆ ಕ್ಲಸ್ಟರ್ ಸಿ.ಆರ್.ಪಿ., ಸಿ.ಕೆ. ದಿನೇಶ್, ಪ್ರಮುಖರಾದ ಪಣಿಯಮ್ಮ, ಸೇವಾ ಸಂಸ್ಥೆಯ ಕಾವ್ಯ, ಶಾಲಾ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಸಹ ಶಿಕ್ಷಕರಾದ ರಾಜಪ್ಪ, ಬೋಜಪ್ಪ, ಲತಾಮಣಿ, ಸುನಂದ, ಸುಧಾ, ಧನು ಮುಂತಾದವರು ಹಾಜರಿದ್ದರು.