ಚೆಯ್ಯಂಡಾಣೆ, ಜು. ೧೦: ಎಸ್.ವೈ.ಎಸ್. ಕೊಡಗು ಜಿಲ್ಲಾ ಇಸಾಬ ಹಾಗೂ ಮಡಿಕೇರಿ ವೈದ್ಯಕೀಯ ಕಾಲೇಜಿನ ಸಹಭಾಗಿತ್ವದಲ್ಲಿ ಎಮ್ಮೆಮಾಡು ಸರ್ಕಲ್‌ನ ಪಡಿಯಾಣಿ ಶಾಖೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಪಡಿಯಾಣಿ ಸುನ್ನಿ ಸೆಂಟರ್ ಸಭಾಂಗಣದಲ್ಲಿ ಎಮ್ಮೆಮಾಡು ಸರ್ಕಲ್ ಅಧ್ಯಕ್ಷ ಅಶ್ರಫ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ೩೫೩ನೇ ರಕ್ತದಾನ ಶಿಬಿರವನ್ನು ಎಸ್.ವೈ. ಎಸ್. ಕರ್ನಾಟಕ ರಾಜ್ಯ ಉಪಾಧ್ಯಕ್ಷÀ ಸಯ್ಯದ್ ಇಲ್ಯಾಸ್ ಅಲ್ ಹೈದ್ರೂಸಿ ತಂಙಳ್ ಪ್ರಾರ್ಥನೆ ನೆರವೇರಿಸಿ ಚಾಲನೆ ನೀಡಿದರು.

ಎಸ್.ವೈ.ಎಸ್. ಕೊಡಗು ಜಿಲ್ಲಾಧ್ಯಕ್ಷÀ ಮುನೀರ್ ಮಹ್ಳರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಕ್ತದಾನದ ಮಹತ್ವ ಹಾಗೂ ರಕ್ತದಾನದಿಂದಾಗುವ ಪ್ರಯೋಜನದ ಕುರಿತು ಹೇಳಿದರು. ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಪಡಿಯಾಣಿ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್, ಪಡಿಯಾಣಿ ಖತೀಬರಾದ ಹಂಝ ರಹ್ಮಾನಿ, ಗ್ರಾ.ಪಂ. ಸದಸ್ಯ ಇಸ್ಮಾಯಿಲ್ ಚಕ್ಕೆರೆ ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಮಾತನಾಡಿದರು. ಒಟ್ಟು ೫೦ ರಷ್ಟು ರಕ್ತದಾನಿಗಳು ರಕ್ತದಾನ ಮಾಡಿದರು.

ಈ ಸಂದರ್ಭ ಕೂರ್ಗ್ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ, ಮಡಿಕೇರಿ ಝೋನ್ ಇಸಾಬಾ ಅಧ್ಯಕ್ಷ ಶಾದುಲಿ ಹಾಜಿ, ಕೋಶಾಧಿಕಾರಿ ಮೊಯ್ದೀನ್, ಪಡಿಯಾಣಿ ಶಾಖಾ ಅಧ್ಯಕ್ಷ ಮೊಯ್ದು ಮುಸ್ಲಿಯಾರ್, ಪಂಚಾಯಿತಿ ಸದಸ್ಯರುಗಳಾದ ಗಫೂರ್, ಮಾಹಿನ್, ಯೂಸುಫ್, ಉಲಮಾ, ಉಮರಾ, ರಾಜಕೀಯ ನೇತಾರರು ಮತ್ತಿತರರು ಉಪಸ್ಥಿತರಿದ್ದರು. ಸಯ್ಯದ್ ಝಕರಿಯ ತಂಙಳ್ ಸ್ವಾಗತಿಸಿ, ವಂದಿಸಿದರು.