ಕುಶಾಲನಗರ, ಜು. ೧೦: ಕುಶಾಲನಗರದ ಇನ್ನರ್ ವೀಲ್ ಕ್ಲಬ್ ಪದಗ್ರಹಣ ಕಾರ್ಯಕ್ರಮ ರೋಟರಿ ಸಭಾಂಗಣದಲ್ಲಿ ನಡೆಯಿತು.

ನೂತನ ಸಾಲಿನ ಅಧ್ಯಕ್ಷೆಯಾಗಿ ರೇಷ್ಮಾ ನವೀನ್ ಅಧಿಕಾರ ವಹಿಸಿಕೊಂಡರು. ೨೦೨೪-೨೫ನೇ ಸಾಲಿನ ಅಧ್ಯಕ್ಷೆ ಚಿತ್ರಾ ರಮೇಶ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷೆ, ಸಂಸ್ಥೆ ಸಮಾಜದ ಕ್ಷೇಮಾಭಿವೃದ್ಧಿಗಾಗಿ ಸದಾ ಬದ್ಧವಾಗಿದೆ.

ಸೇವಾ ಚಟುವಟಿಕೆಗಳನ್ನು ವಿಸ್ತಾರಗೊಳಿಸುವುದು, ಸಮಾಜದಲ್ಲಿ ಅಗತ್ಯವಿರುವವರನ್ನು ಗುರುತಿಸಿ, ಅವರಿಗೆ ನೆರವಿನ ಹಸ್ತವನ್ನು ಚಾಚುವುದು, ಸಮೃದ್ಧಿ ಹಾಗೂ ಸಬಲೀಕರಣಕ್ಕೆ ಒತ್ತು ನೀಡುವುದು, ಕ್ಲಬ್ ಸದಸ್ಯರ ಒಕ್ಕೂಟವನ್ನು ಬಲಪಡಿಸುವುದು ಸೇರಿದಂತೆ ವ್ಯಕ್ತಿತ್ವ ಅಭಿವೃದ್ಧಿ, ಪರಿಸರ ಸಂರಕ್ಷಣೆಗೆ ಗಮನಹರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಿಇಟಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೌಶಿಕ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸಾಧನೆ ಮಾಡಿರುವ ಮಾಸ್ಟರ್ ಚಿನ್ಮಿತ್‌ನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಡ ಮಹಿಳೆಯೊಬ್ಬರಿಗೆ ಸಂಸ್ಥೆಯ ವತಿಯಿಂದ ಮೂರು ತಿಂಗಳಿಗಾಗುವಷ್ಟು ರೇಷನ್ ವಿತರಿಸಲಾಯಿತು. ಹಿರಿಯ ನಾಗರಿಕರೊಬ್ಬರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. ವಿಶೇಷಚೇತನ ಮಗುವಿಗೆ ಡೈಪರ್ಸ್ ನೀಡಲಾಯಿತು.

ಈ ಸಂದರ್ಭ ಕಾರ್ಯದರ್ಶಿ ಸುಪ್ರೀತಾ ರವಿ, ನಿಕಟ ಪೂರ್ವ ಅಧ್ಯಕ್ಷೆ ಚಿತ್ರಾ ರಮೇಶ್, ಖಜಾಂಚಿ ಶೀನಾ ಪ್ರಕಾಶ್, ಉಪಾಧ್ಯಕ್ಷೆ ಸೀತಾಲಕ್ಷಿö್ಮ, ಐಎಸ್‌ಒ- ಮಾಲತಿ ಲೋಕೇಶ್, ಸಂಪಾದಕಿ ಪೂರ್ಣಿಮಾ ರಾಜೀವ್ ಸೇರಿದಂತೆ ಮಾಜಿ ಅಧ್ಯಕ್ಷರು, ಸದಸ್ಯರು, ಕುಶಾಲನಗರ ರೋಟರಿ ಅಧ್ಯಕ್ಷರಾದ ಮನುಪೆಮ್ಮಯ್ಯ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.