ಕೂಡಿಗೆ, ಜು. ೧೦: ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೋರಿ ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಅವರಿಗೆ ಕೂಡು ಮಂಗಳೂರು ಗ್ರಾ.ಪಂ. ಅಧ್ಯಕ್ಷ ಭಾಸ್ಕರ್ ನಾಯಕ್ ಮನವಿ ಸಲ್ಲಿಸಿದರು. ೨೪ ಸದಸ್ಯರನ್ನು ಒಳಗೊಂಡ ಕೊಡಗಿನ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಕೂಡುಮಂಗಳೂರಿನಲ್ಲಿ ಸುಮಾರು ೧೦ ಸಾವಿರದಿಂದ ೧೨ ಸಾವಿರ ಜನಸಂಖ್ಯೆ ಇದ್ದು, ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಅನುದಾನ ಅವಶ್ಯಕತೆ ಇದೆ. ಪಂಚಾಯತಿ ವ್ಯಾಪ್ತಿಯ ಆನೆಕೆರೆ ಅಭಿವೃದ್ಧಿಗೂ ಕೂಡ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಭಾಸ್ಕರ್ ನಾಯಕ್ ತಿಳಿಸಿದ್ದಾರೆ.