ಮಡಿಕೇರಿ, ಜು. ೯: ವೀರಾಜಪೇಟೆ ೬೬/೩೩/೧೧ ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದ ವೀರಾಜಪೇಟೆ ಶಾಖಾ ವ್ಯಾಪ್ತಿಯ ವಿಎಫ್-೩ ಕೆಎಸ್‌ಆರ್‌ಟಿಸಿ ಮತ್ತು ವಿಎಫ್-೭ ಹೆಗ್ಗಳ ಫೀಡರ್‌ಗಳಲ್ಲಿ ತಾ.೧೦ ರಂದು ಬೆಳಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಫೀಡರ್‌ಗಳ ಬೇರ್ಪಡಿಸುವ ಕಾರ್ಯ ಕೈಗೆತ್ತಿಕೊಂಡಿರುವುದರಿAದ ಈ ಫೀಡರ್‌ನಿಂದ ಹೊರಹೊಮ್ಮುವ ವೀರಾಜಪೇಟೆ ಪಟ್ಟಣ, ಗೋಣಿಕೊಪ್ಪ ರಸ್ತೆ, ಪಂಜರಪೇಟೆ, ವಿದ್ಯಾನಗರ, ಕೆಎಸ್‌ಆರ್‌ಟಿಸಿ, ಶಾಂತಿನಗರ, ಸುಭಾಶ್‌ನಗರ, ಮೀನುಪೇಟೆ, ಹೆಗ್ಗಳ, ಬೇಟೋಳಿ, ಆರ್ಜಿ, ರಾಮನಗರ, ತೋರ, ಬೂದಿಮಾಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.