ಮಡಿಕೇರಿ, ಜು. ೮: ಹಸು ಹಾಗೂ ಎಮ್ಮೆಯನ್ನು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ತಾ. ೨೪-೦೬-೨೦೨೫ರಂದು ನೋಕ್ಯ ಗ್ರಾಮದ ನಿವಾಸಿ ಆನಂದ ಎ.ಎಸ್. ಅವರು ಎಸ್ಟೇಟ್‌ನ ಕೊಟ್ಟಿಗೆಯಲ್ಲಿ ಕಟ್ಟಿದ್ದ ೨ ಹಸುಗಳನ್ನು ಹಾಗೂ ಭದ್ರಗೋಳ ಗ್ರಾಮದ ನಿವಾಸಿ ಪಿ.ಪಿ.ಮುತ್ತಣ್ಣ ಅವರು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ೧ ಎಮ್ಮೆಯನ್ನು ಕಳವು ಮಾಡಿರುವ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.