ಮಡಿಕೇರಿ, ಜು. ೮: ಭಾರತದ ಸ್ವಾತಂತ್ರೊö್ಯÃತ್ಸವದ ಸಂಭ್ರಮಾಚರಣೆಗಾಗಿ ಅಮೇರಿಕಾದ ನ್ಯೂಯಾರ್ಕ್ನಲ್ಲಿ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ ವತಿಯಿಂದ ೪೩ನೇ ವಲ್ಡ್÷್ರ್ಸ ಲಾರ್ಜೆಸ್ಟ್ ಇಂಡಿಯಾ ಡೇ ಪೆರೇಡ್ ಕಾರ್ಯಕ್ರಮ ಆಗಸ್ಟ್ ೧೭ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತೆಯಾಗಿ ಖ್ಯಾತ ಬಾಲಿವುಡ್ ಸಿನಿಮಾ ತಾರೆ ಕೊಡಗಿನ ಬೆಡಗಿ ಮುಂಡಚಾಡಿರ ರಶ್ಮಿಕಾ ಮಂದಣ್ಣ ಅವರು ಪಾಲ್ಗೊಳ್ಳಲಿದ್ದಾರೆ.
ಭಾರತದ ಸ್ವಾತಂತ್ರೊö್ಯÃತ್ಸವವನ್ನು ಗುರುತಿಸಲು ವಿಶೇಷವಾಗಿ ಅಮೇರಿಕಾದಲ್ಲಿ ಇಂಡಿಯಾ ಡೇ ವಾರ್ಷಿಕ ಮೆರವಣಿಗೆಯನ್ನು ಆಚರಿಸಲಾಗುತ್ತಿದೆ. ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್‌ನಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಈ ಬಾರಿ ೪೩ನೇ ವರ್ಷದ ಕಾರ್ಯಕ್ರಮ ಆಗಸ್ಟ್ ೧೭ರಂದು ನಡೆಯುತ್ತಿದ್ದು, ಇದರಲ್ಲಿ ಬಾಲಿವುಡ್ ನಟಿ ರಶ್ಮಿಕಾ ಮಂದಣ್ಣ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿದ್ದು, ಖ್ಯಾತ ತಾರೆ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಮುದಾಯವನ್ನು ಬಿಂಬಿಸುವ ಕಾರ್ಯಕ್ರಮವಾಗಿದ್ದು, ನ್ಯೂಯಾರ್ಕ್ ನಗರದ ಮ್ಯಾಡಿಸನ್ ಅವೆನ್ಯೂ ನಗರದಲ್ಲಿ ಜರುಗುತ್ತಿದೆ. ರಶ್ಮಿಕಾ ಇದರಲ್ಲಿ ಗ್ರಾö್ಯಂಡ್ ಮಾರ್ಷಲ್ ಆಗಿ ಗಮನ ಸೆಳೆಯಲಿದ್ದಾರೆ. -ಶಶಿ