ಕುಶಾಲನಗರ, ಜು. ೬: ಮನೆಯ ಮುಂದೆ ಬೆಳೆದು ನಿಂತಿದ್ದ ಶ್ರೀಗಂಧದ ಮರವನ್ನು ರಾತ್ರಿ ಕಳ್ಳರು ಕಡಿದು ಸಾಗಾಟ ಮಾಡಿದ ಘಟನೆ ಕುಶಾಲನಗರ ಸಮೀಪ ರಂಗಸಮುದ್ರ ಗ್ರಾಮದ ಮಾವಿನಹಳ್ಳ ಬಳಿ ನಡೆದಿದೆ.
ಗ್ರಾಮದ ನಿವಾಸಿ ಎಂ.ಬಿ. ದೇವಿಪ್ರಸಾದ್ ಎಂಬವರ ಮನೆ ಮುಂಭಾಗ ಬೆಳೆದಿದ್ದ ಮರ ಕಳುವಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಕ್ರಮ ಕೈಗೊಂಡಿದ್ದಾರೆ.