ಕೂಡಿಗೆ, ಜು. ೬ : ಚಿಕ್ಲಿಹೊಳೆ ಜಲಾಶಯವು ಈ ಬಾರಿ ಕಳೆದ ಸಾಲಿಗಿಂತ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬಿದ್ದ ಪರಿಣಾಮವಾಗಿ ಒಂದು ತಿಂಗಳು ಮುಂಚಿತವಾಗಿ ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದಿಂದ ಉಂಗುರ ಆಕಾರದಲ್ಲಿ ಅಣೆಕಟ್ಟೆಯಿಂದ ನೀರು ನದಿಗೆ ಹರಿಯುವ ದೃಶ್ಯ ಮನಮೋಹಕವಾಗಿದೆ. ಇಂತಹ ದೃಶ್ಯವನ್ನು ಮತ್ತು ನೀರಿನ ಸಂಗ್ರಹದ ವೀಕ್ಷಣೆಗೆ ದಿನಂಪ್ರತಿ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.
ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗಸಮುದ್ರ ಗ್ರಾಮದ ಸಮೀಪದಲ್ಲಿರುವ ಸುಂದರವಾದ ರಮಣೀಯ ತಾಣವಾಗಿರುವ ಪ್ರಕೃತಿಯ ಮಡಿಲಲ್ಲಿರುವ ಚಿಕ್ಲಿಹೊಳೆಯು ಇದೀಗ ಸಂಪೂರ್ಣವಾಗಿ ಭರ್ತಿಯಾದ ಹಿನ್ನೆಲೆ ಅದರ ವೀಕ್ಷಣೆಗೆ ರಾಜ್ಯ, ಮತ್ತು ಹೊರ ರಾಜ್ಯದ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ನೀರು ಹರಿಯುವ ದೃಶ್ಯವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರವಾಸಿಗರ ದಂಡು ರಜೆ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಅಗಮಿಸುತ್ತಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ.